ಬಂಟ್ವಾಳ, ಮೇ 10, 2024 (ಕರಾವಳಿ ಟೈಮ್ಸ್) : ದ್ವಿಚಕ್ರ ವಾಹನದಲ್ಲಿ ಡಿಪೋಗೆ ಹಾಲು ಸಾಗಿಸುತ್ತಿದ್ದ ವ್ಯಕ್ತಿಗೆ ನಾಲ್ವರ ತಂಡ ಹಲ್ಲೆ ನಡೆಸಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ಪ್ರವೀಣ್ ರೋಷನ್ ವಾಸ್ ಎಂಬವರು ಡಿಪೋಗೆ ಹಾಲು ಕೊಂಡೊಯ್ಯುತ್ತಿದ್ದ ವೇಳೆ ಆರೋಪಿಗಳಾದ ಅಶೋಕ್ ಸಾಲಿಯಾನ್, ಡೊಂಬಯ್ಯಾ, ಹರಿಣಾಕ್ಷಿ ಹಾಗೂ ಪೂರ್ಣಿಮಾ ಎಂಬವರುಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂದರ್ಭ ಪ್ರವೀಣ್ ರೋಷನ್ ವಾಸ್ ಅವರ ಸಹೋದರಿ ಸ್ಥಳಕ್ಕೆ ತೆರಳಿದ್ದು ಅವರೊಂದಿಗೆ ಅಶೋಕ್ ಸಾಲಿಯಾನ್ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಆರೋಪಿಗಳ ಹಲ್ಲೆಯಿಂದ ಪ್ರವೀಣ್ ರೋಷನ್ ವಾಸ್ ಹಾಗೂ ಅವರ ಸಹೋದರಿ ಕೂಡಾ ಗಾಯಗೊಂಡಿದ್ದಾರೆ, ಆರೋಪಿಗಳು ಹಲ್ಲೆ ನಡೆಸಿದ್ದಲ್ಲದೆ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರವೀಣ್ ರೋಷನ್ ವಾಸ್ ವಿರುದ್ದವೂ ಪ್ರತಿ ದೂರು ದಾಖಲಾಗಿದೆ.
0 comments:
Post a Comment