ಪುತ್ತೂರು, ಮೇ 10, 2024 (ಕರಾವಳಿ ಟೈಮ್ಸ್) : ಬೇಕರಿಯಲ್ಲಿ ಜ್ಯೂಸ್ ಕುಡಿದು ಗ್ಲಾಸನ್ನು ಮೊಬೈಲ್ ಮೇಲೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಹಲ್ಲೆ ಪ್ರಕರಣದ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು-ಪ್ರತಿದೂರು ದಾಖಲಾಗಿದೆ.
ಚಿಕ್ಕಮುಡ್ನೂರು ನಿವಾಸಿ ಅಶ್ವಿರ್ (17) ಎಂಬವರು ಗುರುವಾರ ಮಧ್ಯಾಹ್ನ ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದ ಬಳಿ ಇರುವ ಕ್ಲಾಸಿಕ್ ಬೇಕರಿಯಲ್ಲಿ ಜ್ಯೂಸ್ ಕುಡಿದು ಗ್ಲಾಸನ್ನು ಸರಿಯಾಗಿ ಗಮನಿಸದೆ ಅಲ್ಲೇ ಇದ್ದ ಆರೋಪಿ ಮಹಮ್ಮದ್ ನಹೀಝ್ ಎಂಬಾತನ ಮೊಬೈಲ್ ಮೇಲೆ ಇಟ್ಟಿದ್ದಾರೆ. ಈ ಬಗ್ಗೆ ಆರೋಪಿ ನಹೀಝ್ ತಕರಾರು ತೆಗೆದು ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಾನೆ. ಸದ್ರಿ ಹಲ್ಲೆ ಬಗ್ಗೆ ಅಶ್ವಿರ್ ತನ್ನ ಸಹೋದರನಿಗೆ ಮಾಹಿತಿ ನೀಡಿದಂತೆ ಸ್ಥಳಕ್ಕೆ ಬಂದ ಸಹೋದರ ಅಶ್ವಿರ್ ನನ್ನು ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತರುತ್ತಿದ್ದಾಗ ಆಸ್ಪತ್ರೆ ಬಳಿ ಕಾರಿನಲ್ಲಿ ಬಂದ ಆರೋಪಿಗಳಾದ ಮೊಹಮ್ಮದ್ ನಹೀಝ್, ಆತನ ತಂದೆ ಅಬ್ದುಲ್ ಆರೀಫ್, ಮೊಹಮ್ಮದ್ ಅಲಿ ಯಾನೆ ಜಾಬೀರ್ ಹಾಗೂ ಇತರರು ಸಹೋದರರನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿ ತೆರಳಿರುತ್ತಾರೆ. ಈ ಬಗ್ಗೆ ಗಾಯಗೊಂಡ ಅಶ್ವಿರ್ ಹಾಗೂ ಸಹೋದರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುತ್ತಾರೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 42/2024, ಕಲಂ 341, 323, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಳಿತ್ತೊಟ್ಟು ನಿವಾಸಿ ಮುಹಮದ್ ನಹೀಝ್ ಅವರು ಆರೋಪಿಗಳಾದ ಅಶ್ವೀರ್, ಮೊಹಿನುದ್ದೀನ್ ಮತ್ತು ಇತರರ ವಿರುದ್ಧ ಪ್ರತಿದೂರು ನೀಡಿದ್ದು, ಈ ಬಗ್ಗೆಯೂ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 43/2024 ಕಲಂ 341, 504, 323, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
0 comments:
Post a Comment