ಶಿರಾಡಿ ಘಾಟಿಯಲ್ಲಿ ಕಾರು-ಕಂಟೈನರ್ ನಡುವೆ ಭೀಕರ ಅಪಘಾತ : ಪಾಣೆಮಂಗಳೂರು ಮೂಲದ ತಾಯಿ-ಮಗ ಸ್ಪಾಟ್ ಡೆತ್, ಮಕ್ಕಳ ಸಹಿತ ಇತರ ಪ್ರಯಾಣಿಕರು ಗಂಭೀರ - Karavali Times ಶಿರಾಡಿ ಘಾಟಿಯಲ್ಲಿ ಕಾರು-ಕಂಟೈನರ್ ನಡುವೆ ಭೀಕರ ಅಪಘಾತ : ಪಾಣೆಮಂಗಳೂರು ಮೂಲದ ತಾಯಿ-ಮಗ ಸ್ಪಾಟ್ ಡೆತ್, ಮಕ್ಕಳ ಸಹಿತ ಇತರ ಪ್ರಯಾಣಿಕರು ಗಂಭೀರ - Karavali Times

728x90

21 May 2024

ಶಿರಾಡಿ ಘಾಟಿಯಲ್ಲಿ ಕಾರು-ಕಂಟೈನರ್ ನಡುವೆ ಭೀಕರ ಅಪಘಾತ : ಪಾಣೆಮಂಗಳೂರು ಮೂಲದ ತಾಯಿ-ಮಗ ಸ್ಪಾಟ್ ಡೆತ್, ಮಕ್ಕಳ ಸಹಿತ ಇತರ ಪ್ರಯಾಣಿಕರು ಗಂಭೀರ

ಬೆಂಗಳೂರು, ಮೇ 21, 2024 (ಕರಾವಳಿ ಟೈಮ್ಸ್) : ಸಕಲೇಶಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಶಿರಾಡಿ ಘಾಟಿಯಲ್ಲಿ ಇನ್ನೋವಾ ಕಾರು ಹಾಗೂ ಕಂಟೈನರ್ ಲಾರಿ ನಡುವೆ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಂಟ್ವಾಳ ಮೂಲದ ತಾಯಿ-ಮಗ ಮೃತಪಟ್ಟು, ಕಾರಿನಲ್ಲಿದ್ದ ಮೂವರು ಮಕ್ಕಳ ಸಹಿತ ಇತರ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಮೃತರನ್ನು ಬಂಟ್ವಾಳ ತಾಲೂಕು, ಪಾಣೆಮಂಗಳೂರು ಗ್ರಾಮದ ಬೋಳಂಗಡಿ-ಬೊಂಡಾಲ ನಿವಾಸಿ ಶಬ್ಬೀರ್ ಎಂಬವರ ಪತ್ನಿ ಸಫಿಯಾ (50) ಹಾಗೂ ಅವರ ಪುತ್ರ ಮಹಮ್ಮದ್ ಶಫೀಕ್ (20) ಎಂದು ಹೆಸರಿಸಲಾಗಿದೆ. 

ಶಿರಾಡಿ ಘಾಟಿಯ ಕೆಂಪುಹೊಳೆ ಬಳಿ ಬರುತ್ತಿದ್ದಾಗ ಎದುರುಗಡೆಯಿಂದ ಬಂದ ಕಂಟೈನರ್ ಲಾರಿ ಡಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ. 

ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ವಾಪಾಸು ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. 

ಮೃತ ಕಾರು ಚಾಲಕ ಶಫೀಕ್ ಕೊಣಾಜೆ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಿಪೆÇ್ಲಮಾ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಅಪಘಾತದ ತಕ್ಷಣ ಸ್ಥಳೀಯರು ಗಾಯಾಳುಗಳನ್ನು ನೆಲ್ಯಾಡಿ ಆಸ್ಪತ್ರಗೆ ಸಾಗಿಸಿದ್ದು, ಅದಾಗಲೇ ತಾಯಿ-ಮಗ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತದೇಹಗಳನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯೆ ಶವಾಗಾರಕ್ಕೆ ಸಾಗಿಸಲಾಗಿದ್ದು, ಉಳಿದ ಗಾಯಾಳುಗಳು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಶಿರಾಡಿ ಘಾಟಿಯಲ್ಲಿ ಕಾರು-ಕಂಟೈನರ್ ನಡುವೆ ಭೀಕರ ಅಪಘಾತ : ಪಾಣೆಮಂಗಳೂರು ಮೂಲದ ತಾಯಿ-ಮಗ ಸ್ಪಾಟ್ ಡೆತ್, ಮಕ್ಕಳ ಸಹಿತ ಇತರ ಪ್ರಯಾಣಿಕರು ಗಂಭೀರ Rating: 5 Reviewed By: karavali Times
Scroll to Top