ಬಂಟ್ವಾಳ, ಮೇ 17, 2024 (ಕರಾವಳಿ ಟೈಮ್ಸ್) : ಜೀಪ್ ಡಿಕ್ಕಿ ಹೊಡೆದು ಬೈಕ್ ಸವಾರ ಆಸ್ಪತ್ರೆಗೆ ದಾಖಲಾದ ಘಟನೆ ಪಿಲಾತಬೆಟ್ಟು ಗ್ರಾಮದ ಪೂಂಜಾಲಕಟ್ಟೆ ನಂದಗೋಕುಲ ಹಾಲ್ ಮುಂಭಾಗದಲ್ಲಿ ಗುರುವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.
ಗಾಯಗೊಂಡ ಬೈಕ್ ಸವಾರನನ್ನು ಮೊಹಮ್ಮದ್ ಅರ್ಫಾಝ್ ಎಂದು ಹೆಸರಿಸಲಾಗಿದೆ. ಅರ್ಫಾಝ್ ತನ್ನ ಬೈಕಿನಲ್ಲಿ ಬಂಟ್ವಾಳದಿಂದ ಪಣಕಜೆ ಕಡೆಗೆ ಪ್ರಯಾಣಿಸುತ್ತಿದ್ದಾಗ ಪೂಂಜಾಲಕಟ್ಟೆ ನಂದಗೋಕುಲ ಹಾಲ್ ಮುಂಭಾಗದಲ್ಲಿ ವಸಂತ ಶೆಟ್ಟಿ ಎಂಬವರು ಚಲಾಯಿಸುತ್ತಿದ್ದ ಜೀಪ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಗಾಯಗೊಂಡ ಬೈಕ್ ಸವಾರನನ್ನು ಸ್ಥಳೀಯರು ಪೂಂಜಾಲಕಟ್ಟೆ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆಯಿಂದ ಬೈಕ್ ಹಾಗೂ ಜೀಪು ಜಖಂಗೊಂಡಿದೆ. ಈ ಬಗ್ಗೆ ಪಣಕಜೆ ನಿವಾಸಿ ರಶೀದ್ ಅವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment