ಮೇ 27 ರಂದು ಶ್ರೀ ಚರಣ್ ಸೌಹಾರ್ದ ಕೋ ಅಪರೇಟೀವ್ ಬ್ಯಾಂಕ್ ಕೊಡಿಗೆಹಳ್ಳಿ ಶಾಖೆ ಶುಭಾರಂಭ - Karavali Times ಮೇ 27 ರಂದು ಶ್ರೀ ಚರಣ್ ಸೌಹಾರ್ದ ಕೋ ಅಪರೇಟೀವ್ ಬ್ಯಾಂಕ್ ಕೊಡಿಗೆಹಳ್ಳಿ ಶಾಖೆ ಶುಭಾರಂಭ - Karavali Times

728x90

25 May 2024

ಮೇ 27 ರಂದು ಶ್ರೀ ಚರಣ್ ಸೌಹಾರ್ದ ಕೋ ಅಪರೇಟೀವ್ ಬ್ಯಾಂಕ್ ಕೊಡಿಗೆಹಳ್ಳಿ ಶಾಖೆ ಶುಭಾರಂಭ

ಬೆಂಗಳೂರು, ಮೇ 25, 2024 (ಕರಾವಳಿ ಟೈಮ್ಸ್) : ಸಹಕಾರಿ ರಂಗದಲ್ಲಿ ಮಹತ್ವದ ಹೆಗ್ಗುರುತುಗಳನ್ನು ಮೂಡಿಸುತ್ತಿರುವ ಶ್ರೀ ಚರಣ್ ಸೌಹಾರ್ದ ಕೋ-ಆಪರೇಟೀವ್ ಬ್ಯಾಂಕಿನ 10ನೇ ಶಾಖೆ ಸಹಕಾರಿ ನಗರ ಸಮೀಪದ ಕೊಡಿಗೆ ಹಳ್ಳಿಯಲ್ಲಿ ಮೇ 27 ರಂದು ಕಾರ್ಯಾರಂಭ ಮಾಡಲಿದೆ. 

ರಾಜ್ಯ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಾಧೀಶ ಪಿ.ಎಸ್. ದಿನೇಶ್ ಕುಮಾರ್ ನೂತನ ಶಾಖೆಯನ್ನು ಉದ್ಘಾಟಿಸುವರು. ಹಿರಿಯ ಪತ್ರಕರ್ತ, ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್. ರಂಗನಾಥ್ ಸಹಿತ ಹಲವು ಗಣ್ಯರು ಶುಭಾರಂಭ ಸಮಾರಂಭದಲ್ಲಿ ಭಾಗಹಿಸಲಿದ್ದಾರೆ. 

ಸಹಕಾರಿ ವಲಯದಲ್ಲಿ ಕಾಲು ಶತಮಾನಗಳ ಇತಿಹಾಸ ಹೊಂದಿರುವ ಶ್ರೀ ಚರಣ್ ಸೌಹಾರ್ದ ಕೋ-ಆಪರೇಟೀವ್ ಬ್ಯಾಂಕ್ ಇದೀಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಈ ಮೂಲಕ ನಗರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಲಿದೆ. ತಮಗೆ ಸಹಕಾರಿ ವಲಯದಲ್ಲಿ ಐದು ದಶಕಗಳ ಅನುಭವವಿದ್ದು, ಇದನ್ನು ಬ್ಯಾಂಕ್ ಬೆಳವಣಿಗೆಗೆ ಬಳಸಿಕೊಳ್ಳಲಾಗುವುದು. ಶ್ರೀ ಚರಣ್ ಕೋ ಅಪರೇಟೀವ್ ಬ್ಯಾಂಕ್ ಅನ್ನು ಸಹಕಾರಿ ವಯದಲ್ಲಿ ನಂಬರ್ ಒನ್ ಸ್ಥಾನಕ್ಕೆ ಕೊಂಡೊಯ್ಯುವುದು ತಮ್ಮ ಮಹತ್ವಾಕಾಂಕ್ಷೆಯ ಗುರಿಯಾಗಿದೆ ಎಂದು ಬ್ಯಾಂಕ್  ಸಂಸ್ಥಾಪಕ ಅಧ್ಯಕ್ಷ ಬಿ.ವಿ. ದ್ವಾರಕಾನಾಥ್ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮೇ 27 ರಂದು ಶ್ರೀ ಚರಣ್ ಸೌಹಾರ್ದ ಕೋ ಅಪರೇಟೀವ್ ಬ್ಯಾಂಕ್ ಕೊಡಿಗೆಹಳ್ಳಿ ಶಾಖೆ ಶುಭಾರಂಭ Rating: 5 Reviewed By: karavali Times
Scroll to Top