ಮೊಡಂಕಾಪು : ಟ್ರಾನ್ಸ್ ಫಾರ್ಮರ್ ಇರುವ ವಿದ್ಯುತ್ ಕಂಬಕ್ಕೆ ಬೆಂಕಿ, ಸ್ಥಳೀಯರಲ್ಲಿ ಆತಂಕ - Karavali Times ಮೊಡಂಕಾಪು : ಟ್ರಾನ್ಸ್ ಫಾರ್ಮರ್ ಇರುವ ವಿದ್ಯುತ್ ಕಂಬಕ್ಕೆ ಬೆಂಕಿ, ಸ್ಥಳೀಯರಲ್ಲಿ ಆತಂಕ - Karavali Times

728x90

21 May 2024

ಮೊಡಂಕಾಪು : ಟ್ರಾನ್ಸ್ ಫಾರ್ಮರ್ ಇರುವ ವಿದ್ಯುತ್ ಕಂಬಕ್ಕೆ ಬೆಂಕಿ, ಸ್ಥಳೀಯರಲ್ಲಿ ಆತಂಕ

ಬಂಟ್ವಾಳ, ಮೇ 21, 2024 (ಕರಾವಳಿ ಟೈಮ್ಸ್) : ಬಿ ಸಿ ರೋಡು ಸಮೀಪದ ಮೊಡಂಕಾಪು ಬಳಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಇರುವ ಕಂಬಕ್ಕೆ ಬೆಂಕಿ ಬಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾದ ಘಟನೆ ಮಂಗಳವಾರ ಸಂಭವಿಸಿದೆ. 

ಮಂಗಳವಾರ ಅಪರಾಹ್ನ ಸುರಿದ ಗಾಳಿ-ಮಳೆಯ ಸಂದರ್ಭ ಟ್ರಾನ್ಸ್ ಫಾರ್ಮರ್ ಇರುವ ವಿದ್ಯುತ್ ಕಂಬಕ್ಕೆ ಶಾರ್ಟ್ ಸರ್ಕಿಟ್ ಕಾರಣದಿಂದ ಈ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬೆಂಕಿ ಕಾರಣದಿಂದ ಕಂಬದಲ್ಲಿದ್ದ ವಿದ್ಯುತ್ ತಂತಿಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆಯಿಂದ ಸ್ಥಳದಲ್ಲಿ ಕೆಲ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ತಕ್ಷಣ ಸಮಯ ಪ್ರಜ್ಞೆ ಮೆರೆದ ಸ್ಥಳೀಯರು ಈ ರಸ್ತೆಯ ವಾಹನ ಸಂಚಾರಕ್ಕೆ ಬ್ರೇಕ್ ಹಾಕಿ ಸಂಭಾವ್ಯ ಅನಾಹುತ ತಪ್ಪಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಅಗ್ನಿಶಾಮಕ ಅಧಿಕಾರಿ ರಾಜೇಶ್ ನೇತೃತ್ವದ ಸಿಬ್ಬಂದಿಗಳು ಹಾಗೂ ಮೆಸ್ಕಾಂ ಇಲಾಖಾ ಸಿಬ್ಬಂದಿಗಳು ಬೆಂಕಿ ನಂದಿಸಲು ಕ್ರಮ ಕೈಗೊಂಡರು. 

  • Blogger Comments
  • Facebook Comments

0 comments:

Post a Comment

Item Reviewed: ಮೊಡಂಕಾಪು : ಟ್ರಾನ್ಸ್ ಫಾರ್ಮರ್ ಇರುವ ವಿದ್ಯುತ್ ಕಂಬಕ್ಕೆ ಬೆಂಕಿ, ಸ್ಥಳೀಯರಲ್ಲಿ ಆತಂಕ Rating: 5 Reviewed By: karavali Times
Scroll to Top