ಬಂಟ್ವಾಳ, ಜೂನ್ 29, 2024 (ಕರಾವಳಿ ಟೈಮ್ಸ್) : ಬಿ ಸಿ ರೋಡಿನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವ್ಯಕ್ತಿಯ ಬ್ಯಾಗಿನಲ್ಲಿರಿಸಿದ್ದ ಮೊಬೈಲ್ ಫೋನ್ ಎಗರಿಸಿದ ಘಟನೆ ಬುಧವಾರ ಸಂಜೆ ನಡೆದಿದ್ದು, ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕು, ಪೂಂಜಾಲಕಟ್ಟೆ ಸಮೀಪದ ಕುಕ್ಕಳ ಗ್ರಾಮದ ನಿವಾಸಿ ಮದುಶ್ರೀ ಅವರು ಬುಧವಾರ ಸಂಜೆ ತನ್ನ ಮೊಬೈಲನ್ನು ಬ್ಯಾಗಿನಲ್ಲಿರಿಸಿ ಪೂಂಜಾಲಕಟ್ಟೆಗೆ ಹೋಗುವರೇ ಬಿ ಸಿ ರೋಡಿನಲ್ಲಿ ಬಸ್ಸಿಗಾಗಿ ಕಾಯುತ್ತಿರುವಾಗ ತನ್ನ ಬ್ಯಾಗಿನಲ್ಲಿರಿಸಿದ್ದ ಮೊಬೈಲನ್ನು ಯಾರೋ ಕಳ್ಳರು ಎಗರಿಸಿದ್ದಾರೆ ಎಂದು ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ನಗರ ಪೊಲೀಸರು ಮೊಬೈಲ್ ಕಳ್ಳರಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.
0 comments:
Post a Comment