ಬಂಟ್ವಾಳ, ಜುಲೈ 27, 2024 (ಕರಾವಳಿ ಟೈಮ್ಸ್) : ಬಿ ಸಿ ರೋಡಿನ ಮೇಲ್ಸೇತುವೆ ಕೆಳಗೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲಪಡ್ನೂರು ಗ್ರಾಮದ ಕೊಡಂಗಾಯಿ ನಿವಾಸಿ ಉದಯ ನಾರಾಯಣ ಭಟ್ ಅವರು ತನ್ನ ಸುಜುಕಿ ಝ್ಯೂ ಮಾದರಿಯ ದ್ವಿಚಕ್ರ ವಾಹನವನ್ನು ಜುಲೈ 13 ರಂದು ಶನಿವಾರ ಬೆಳಿಗ್ಗೆ ಬಿ ಮೂಡ ಗ್ರಾಮದ ಬಿ ಸಿ ರೋಡು ಮೇಲ್ಸೇತುವೆ ಕೆಳಗೆ ನಿಲ್ಲಿಸಿ ಸಕಲೇಶಪುರಕ್ಕೆ ತೆರಳಿದ್ದರು. ಜುಲೈ 15 ರಂದು ಸೋಮವಾರ ವಾಪಾಸು ಬಂದು ನೋಡಿದಾಗ ದ್ವಿಚಕ್ರ ವಾಹನ ನಾಪತ್ತೆಯಾಗಿರುತ್ತದೆ. ಈ ಬಗ್ಗೆ ಬಂಟ್ವಾಳ ಪರಿಸರದಲ್ಲಿ ಹುಡುಕಾಡಿದರೂ ಪತ್ತೆಯಾಗದ ಹಿನ್ನಲೆಯಲ್ಲಿ ಇದೀಗ ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
0 comments:
Post a Comment