ಬಂಟ್ವಾಳ, ಜುಲೈ 26, 2024 (ಕರಾವಳಿ ಟೈಮ್ಸ್) : ಬಂಟ್ವಾಳದಲ್ಲಿ ಮಳೆ ಹಾನಿ ಪ್ರಕರಣಗಳು ಮುಂದುವರಿದಿದೆ. ಮಾಣಿ ಗ್ರಾಮದ ಸೂರಿಕುಮೇರು ನಿವಾಸಿ ಚೆನ್ನಮ್ಮ ಅವರ ವಾಸ್ತವ್ಯದ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಪುದು ಗ್ರಾಮದ ಮಾರಿಪಳ್ಳ ನಿವಾಸಿ ಮೊಯಿದಿನ್ ಬಿನ್ ಎಫ್ ಎಚ್ ಇಸ್ಮಾಯಿಲ್ ಅವರ ಮನೆ ಹಂಚು ಹಾಗೂ ಗೋಡೆಗೆ ಹಾನಿಯಾಗಿದೆ. ಮಾರಿಪಳ್ಳ ನಿವಾಸಿ ಚಂದ್ರಕಲಾ ಕೋಂ ಶೇಖರ ಪೂಂಜಾ ಅವರ ಮನೆ ಹಂಚು ಹಾನಿಯಾಗಿದೆ. ಮಾರಿಪಳ್ಳ ನಿವಾಸಿ ಹಾಜಿರಾ ಕೋಂ ಇಬ್ರಾಹಿಂ ಅವರ ಮನೆ ಹಂಚು ಹಾಗೂ ಗೋಡೆಗೆ ಹಾನಿಯಾಗಿದೆ. ಪುದು ನಿವಾಸಿ ಹಸನಬ್ಬ ಬಿನ್ ಅಬೂಬಕ್ಕರ್ ಅವರ ಮನೆ ಹಂಚು ಪೂರ್ತಿ ಹಾನಿಯಾಗಿದೆ. ಜುಮಾದಿಗುಡ್ಡೆ ನಿವಾಸಿ ಸೈನಾಝ್ ಕೋಂ ಸಲೀಮ ಅವರ ಮನೆಗೆ ಮರ ಬಿದ್ದು ಹಂಚು ಹಾನಿಯಾಗಿದೆ.
ತುಂಬೆ ಗ್ರಾಮದ ನಿವಾಸಿ ಸಾರಮ್ಮ ಅವರ ಮನೆಗೆ ಪಕ್ಕದ ಮನೆಯ ಶೀಟ್ ಬಿದ್ದು ಹಂಚು ಪುಡಿಯಾಗಿದೆ. ಮನೆಯಲ್ಲಿದ್ದ ರಿಯಾಜ್ ಎಂಬವರಿಗೆ ಗಾಯ ಆಗಿದ್ದು, ಆಸ್ಪತ್ರೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ನರಿಕೊಂಬು ಗ್ರಾಮದ ಮಿತ್ತಿಲಕೋಡಿ ನಿವಾಸಿ ನಾರಾಯಣ ಬಿನ್ ಈಶ್ವರ ಸಪಲ್ಯ ಅವರ ವಾಸ್ತವ್ಯದ ಮನೆ ಮೇಲೆ ಮಾವಿನ ಮರ ಮುರಿದು ಬಿದ್ದು ಹಾನಿ ಸಂಭವಿಸಿದೆ.
0 comments:
Post a Comment