ಬಂಟ್ವಾಳ, ಜುಲೈ 24, 2024 (ಕರಾವಳಿ ಟೈಮ್ಸ್) : ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡ ಘಟನೆ ಶಂಭೂರು ಗ್ರಾಮದ ದಿಂಡಿಕೆರೆ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.
ಗಾಯಗೊಂಡ ಬೈಕ್ ಸವಾರನನ್ನು ಧರ್ಣಪ್ಪ ಎಂದು ಹೆಸರಿಸಲಾಗಿದೆ. ಪುತ್ತೂರು ತಾಲೂಕು, ಇರ್ದೆ ಗ್ರಾಮದ ನಿವಾಸಿ ರಾಧಾಕೃಷ್ಣ ಬೋರ್ಕರ್ ಅವರು ತನ್ನ ಕಾರಿನಲ್ಲಿ ಗಂಗಾಧರ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ತೆರಳುತ್ತಿದ್ದ ವೇಳೆ ದಿಂಡಿಕೆರೆಯಲ್ಲಿ ಪಾಣೆಮಂಗಳೂರು ಕಡೆಯಿಂದ ಧರ್ಣಪ್ಪ ಅವರು ಚಲಾಯಿಸಿಕೊಂಡು ಬಂದ ಬೈಕ್ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ರಸ್ತೆಗೆ ಬಿದ್ದು ಗಾಯಗೊಂಡ ಧರ್ಣಪ್ಪ ಅವರನ್ನು ಬಿ ಸಿ ರೋಡಿನ ಸೋಮಯಾಜಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೇಲ್ದರ್ಜೆಯ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತಕ್ಕೆ ಬೈಕ್ ಸವಾರನ ದುಡುಕುತನದ ಚಾಲನೆಯೇ ಕಾರಣ ಎನ್ನಲಾಗಿದ್ದು, ಅಪಘಾತದಿಂದ ಕಾರು ಜಖಂಗೊಂಡಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment