ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಬ್ಯಾನರ್, ಫ್ಲೆಕ್ಸ್ ಅಳವಡಿಸುವವರ ವಿರುದ್ದ ಕಠಿಣ ಕ್ರಮದ ಸೂಚನೆ - Karavali Times ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಬ್ಯಾನರ್, ಫ್ಲೆಕ್ಸ್ ಅಳವಡಿಸುವವರ ವಿರುದ್ದ ಕಠಿಣ ಕ್ರಮದ ಸೂಚನೆ - Karavali Times

728x90

3 August 2024

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಬ್ಯಾನರ್, ಫ್ಲೆಕ್ಸ್ ಅಳವಡಿಸುವವರ ವಿರುದ್ದ ಕಠಿಣ ಕ್ರಮದ ಸೂಚನೆ

 ಬಂಟ್ವಾಳ, ಆಗಸ್ಟ್ 03, 2024 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ವಾಣಿಜ್ಯ, ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕ ಉದ್ದೇಶದ ಬ್ಯಾನರ್/ ಫ್ಲೆಕ್ಸ್ ಗಳನ್ನು ಅನುಮತಿರಹಿತವಾಗಿ ಅಳವಡಿಸುತ್ತಿದ್ದು, ಗಾಳಿ-ಮಳೆಗೆ ವಾಹನ ಸವಾರರ, ಪಾದಚಾರಿಗಳ ಬಿದ್ದು ಅಪಾಯ ಸಂಭವಿಸುವ ಸಾಧ್ಯತೆ ಇರುವುದರಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ಪುರಸಭೆ ವತಿಯಿಂದ ತೆರವುಗೊಳಿಸಲಾಗಿದೆ. ಆದರೂ ಅಲ್ಲಲ್ಲಿ ಅನುಮತಿ ರಹಿತವಾಗಿ ಅಳವಡಿಸುತ್ತಿರುವುದು ಕಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಈ ರೀತಿ ಬ್ಯಾನರ್-ಫ್ಲೆಕ್ಸ್ ಗಳನ್ನು ಅಳವಡಿಸುವುದು ಕಂಡು ಬಂದರೆ ಅಂತಹ ವಾಣಿಜ್ಯ ಮಳಿಗೆಗಳ ಮಾಲಕರ, ಕಾರ್ಯಕ್ರಮ ಆಯೋಜಕರ ವಿರುದ್ದ ಮತ್ತು ಬ್ಯಾನರ್ ತಯಾರಿಸಿ ಅಳವಡಿಸುವ ಸಂಸ್ಥೆಯವರ ವಿರುದ್ದ ದೂರು ದಾಖಲಿಸಿ ಮೊಕದ್ದಮೆ ಹೂಡಲಾಗುವುದು ಎಂದು ಪುರಸಭಾ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಬ್ಯಾನರ್, ಫ್ಲೆಕ್ಸ್ ಅಳವಡಿಸುವವರ ವಿರುದ್ದ ಕಠಿಣ ಕ್ರಮದ ಸೂಚನೆ Rating: 5 Reviewed By: karavali Times
Scroll to Top