ಬಂಟ್ವಾಳ, ಆಗಸ್ಟ್ 05, 2024 (ಕರಾವಳಿ ಟೈಮ್ಸ್) : ತಂಡವೊಂದು ಮೂವರಿಗೆ ಚೂರಿ ಇರಿದು ಪರಾರಿಯಾದ ಘಟನೆ ಬಂಟ್ವಾಳ-ತುಂಬ್ಯ ಜಂಕ್ಷನ್ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ.
ಘರ್ಷಣೆ ಹಾಗೂ ಚೂರಿ ಇರಿತದಿಂದ ಗಾಯಗೊಂಡವರನ್ನು ಹರೀಶ್ ಪೂಜಾರಿ, ವಿ£ೀತ್, ಪೃಥ್ವಿರಾಜ್ ಎಂದು ಹೆಸರಿಸಲಾಗಿದೆ. ಆರೋಪಿಗಳನ್ನು ಪ್ರದೀಪ್ ಅಜ್ಜಿಬೆಟ್ಟು, ಪುಷ್ಪರಾಜ್ ಅಲೆತ್ತೂರು, ಶರಣ್ ಕೈಕಂಬ, ವಸಂತ ಕಾಮಾಜೆ, ರಾಕೇಶ್, ಅಶ್ವತ್ ಹಾಗೂ ಇತರ 4-5 ಮಂದಿ ಎನ್ನಲಾಗಿದೆ.
ಈ ಬಗ್ಗೆ ಬಂಟ್ವಾಳ-ಬೈಪಾಸ್ £ವಾಸಿ ಹರೀಶ್ ಪೂಜಾರಿ ಎಂಬವರು ಬಂಟ್ವಾಳ ನಗರ ಪೊಲೀಸರಿಗೆ ದೂರು £ೀಡಿದ್ದು, ಹರೀಶ ಪೂಜಾರಿ ಅವರು ಭಾನುವಾರ ಸಂಜೆ ತುಂಬ್ಯಾ ಜಂಕ್ಷ£್ನಗೆ ಬಂದಿದ್ದವರು ಹಿಂತಿರುಗಿ ಮನೆಗೆ ತೆರಳಲು, ತುಂಬ್ಯಾ ಜಂಕ್ಷನ್ ಬಳಿ ಮುಖ್ಯ ರಸ್ತೆಗೆ ಬಂದಾಗ, ಪರಿಚಯದ ಬಿ ಸಿ ರೋಡ್ ಅಜ್ಜಿಬೆಟ್ಟುವಿನ ಪ್ರದೀಪ್, ಪುಷ್ಪರಾಜ್ ಅಲೆತ್ತೂರು, ಶರಣ್ ಕೈಕಂಬ, ವಸಂತ ಕಾಮಾಜೆ, ರಾಕೇಶ್, ಅಶ್ವತ್ ಹಾಗೂ ಇತರ ನಾಲ್ಕೈದು ಜನ ಎರಡು ಕಾರುಗಳಲ್ಲಿ ಹಾಗೂ ಒಂದು ಮೋಟಾರು ಸೈಕಲಿನಲ್ಲಿ ಬಂದು ಹರೀಶ್ ಪೂಜಾರಿ ಅವರನ್ನು ತಡೆದು ಅವ್ಯಾಚವಾಗಿ ಬೈದಿರುತ್ತಾರೆ. ಈ ವೇಳೆ ಅಕ್ಷೇಪಿಸಿದ ಹರೀಶ್ ಪೂಜಾರಿ ಅವರಿಗೆ ಆರೋಪಿಗಳು ಹಲ್ಲೆ ನಡೆಸಿದ್ದು, ಅಷ್ಟರಲ್ಲಿ ಬೋಬ್ಬೆ ಕೇಳಿ ಹರೀಶ್ ಪೂಜಾರಿ ಅವರ ಪರಿಚಯದ ಕೀರ್ತನ್, ಪೃಥ್ವಿರಾಜ್ ಹಾಗೂ ವಿ£ೀತ್ ಅವರು ಅಲ್ಲಿಗೆ ಓಡಿ ಬಂದು ಹಲ್ಲೆ ನಡೆಸುತ್ತಿದ್ದುದನ್ನು ತಡೆಯಲು ಪ್ರಯತ್ನಿಸಿರುತ್ತಾರೆ. ಆರೋಪಿಗಳು ಅವರಿಗೂ ಹಲ್ಲೆ ನಡೆಸಿದ್ದು, ಆರೋಪಿಗಳ ಪೈಕಿ ಅಶ್ವತ್ ಎಂಬಾತನು ವಿ£ೀತ್ ಎಂಬಾತ£ಗೆ ಚೂರಿಯಿಂದ ಇರಿದಿರುತ್ತಾನೆ, ಮತ್ತೋರ್ವ ಆರೋಪಿ ಶರಣ್ ಎಂಬವನು ಪೃಥ್ವಿರಾಜ್ ಎಂಬಾತ£ಗೆ ತಿವಿದಿರುತ್ತಾನೆ. ಅಷ್ಟರಲ್ಲಿ ಸಾರ್ವಜ£ಕರು ಹಾಗೂ ಪರಿಚಿತರು ಸೇರಿದ್ದನ್ನು ನೊಡಿದ ಆರೋಪಿಗಳು ಹಲ್ಲೆ ನಡೆಸಿದ ಚೂರಿಗಳೊಂದಿಗೆ ಅವರು ಬಂದಿದ್ದ ವಾಹನಗಳಲ್ಲಿ ಹೋಗಿರುತ್ತಾರೆ.
ಹಲ್ಲೆ ಹಾಗೂ ಚೂರಿ ಇರಿತದಿಂದ ಗಾಯಗೊಂಡ ಮೂವರನ್ನೂ ಚಿಕಿತ್ಸೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದು, ಚೂರಿ ಇರಿತದಿಂದ ತೀವ್ರವಾಗಿ ಗಾಯಗೊಂಡ ವಿ£ೀತ್ ಹಾಗೂ ಪೃಥ್ವಿರಾಜ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ದರ್ಜೆಯ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 136/2024 ಕಲಂ 189(2), 191(2), 191(3), 126(2), 352, 115(2), 118(1), 109(1), 190, ಬಿ ಎನ್ ಎಸ್ 2023 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತ£ಖೆ ಕೈಗೊಂಡಿದ್ದಾರೆ.
0 comments:
Post a Comment