ಬಂಟ್ವಾಳ, ಆಗಸ್ಟ್ 16, 2024 (ಕರಾವಳಿ ಟೈಮ್ಸ್) : ಬಿ ಸಿ ರೋಡಿನ ಪದ್ಮ ಕಾಂಪ್ಲೆಕ್ಸ್ ಕಟ್ಟಡದ ತಳಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ಮಟ್ಕಾ ಚೀಟಿ ವ್ಯವಹಾರ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ಡಿವೈಎಸ್ಪಿ ವಿಜಯಪ್ರಸಾದ್ ನೇತೃತ್ವದ ಪೊಲೀಸರು ಸಾವಿರಾರು ರೂಪಾಯಿ ಮೌಲ್ಯದ ಸೊತ್ತುಗಳ ಸಹಿತ ಮೂವರನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ಕೇರಳ ರಾಜ್ಯದ ಮಂಜೇಶ್ವರ ಸಮೀಪದ ಪಾವೂರು ನಿವಾಸಿ ಸಜೀತ್ ಕೆ (38), ಮಂಗಳೂರು ತಾಲೂಕು ಉಚ್ಚಿಲ್ ಕಪಿತಾನಿಯೋ ಶಾಲಾ ಬಳಿ ನಿವಾಸಿ ವೀಶಾಲ್ ಸಿ ಉಚ್ಚಿಲ್ (35) ಹಾಗೂ ಮಂಜೇಶ್ವರ-ಬಡ್ಡಹಿತ್ತಲು ನಿವಾಸಿ ಸುನೀಲ್ ಕುಮಾರ್ (39) ಎಂದು ಗುರುತಿಸಲಾಗಿದೆ.
ಆಗಸ್ಟ್ 14 ರಂದು ಮಧ್ಯಾಹ್ನ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಡಿವೈಎಸ್ಪಿ ನೇತೃತ್ವದ ಪೊಲೀಸರು ಈ ದಾಳಿ ಸಂಘಟಿಸಿದ್ದು, ದಾಳಿ ವೇಳೆ ಸುಮಾರು 70,505/- ರೂಪಾಯಿ ಮೌಲ್ಯದ ವಿವಿಧ ಮುಖ ಬೆಲೆಯ ನೋಟುಗಳು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment