ಅನಂತಾಡಿಯಲ್ಲಿ ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು ಕಾರ್ಯಕ್ರಮ : ಮಕ್ಕಳೊಂದಿಗೆ ಕೆಸರಾಟವಾಡಿ ಮನರಂಜಿಸಿದ ಮಕ್ಕಳ ಪ್ರೀತಿಯ ಡೀಸಿ ಮುಲ್ಲೈ ಮುಹಿಲನ್ - Karavali Times ಅನಂತಾಡಿಯಲ್ಲಿ ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು ಕಾರ್ಯಕ್ರಮ : ಮಕ್ಕಳೊಂದಿಗೆ ಕೆಸರಾಟವಾಡಿ ಮನರಂಜಿಸಿದ ಮಕ್ಕಳ ಪ್ರೀತಿಯ ಡೀಸಿ ಮುಲ್ಲೈ ಮುಹಿಲನ್ - Karavali Times

728x90

22 September 2024

ಅನಂತಾಡಿಯಲ್ಲಿ ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು ಕಾರ್ಯಕ್ರಮ : ಮಕ್ಕಳೊಂದಿಗೆ ಕೆಸರಾಟವಾಡಿ ಮನರಂಜಿಸಿದ ಮಕ್ಕಳ ಪ್ರೀತಿಯ ಡೀಸಿ ಮುಲ್ಲೈ ಮುಹಿಲನ್

ಬಂಟ್ವಾಳ, ಸೆಪ್ಟೆಂಬರ್ 22, 2024 (ಕರಾವಳಿ ಟೈಮ್ಸ್) : ರೈತ ದೇಶದ ಬೆನ್ನೆಲುಬು. ರೈತ ಸಂತೋಷದೊಂದಿದ್ದರೆ ಇಡೀ ಜಗತ್ತೇ ಸಂತಸ ಪಡುವುದು, ಪ್ರತಿಯೊಬ್ಬರ ಆಹಾರವನ್ನು ಪೂರೈಸಿ ಎಲ್ಲರ ಹಸಿವು ನೀಗಿಸುವ ರೈತ ಯಾವಾಗಲೂ ಸಂತೋಷವಾಗಿರಬೇಕು. ಜಿಲ್ಲೆಯ ಹವಾಮಾನದ ಎಡರು ತೊಡರುಗಳನ್ನು ದಾಟಿ ಆತ ಬದುಕಬೇಕಾಗುತ್ತದೆ. ಈ ನೆಲದ ಸಂಸ್ಕೃತಿಯು ಬೆಳೆದು ಬಂದಿರುವುದು ಗದ್ದೆಗಳಿಂದ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್  ಹೇಳಿದರು 

ಅನಂತಾಡಿ ಗ್ರಾಮದ ನವ ಭಾರತ್ ಯುವಕ ಸಂಘ (ರಿ) ವತಿಯಿಂದ ಪಡಿಪಿರೆ ಗದ್ದೆಯಲ್ಲಿ ಭಾನುವಾರ ನಡೆದ 6ನೇ ವರ್ಷದ “ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು” ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಮಳೆಗಾಗಿ ರಜೆ ನೀಡುವ ಬಗ್ಗೆ ಸ್ನೇಹಿತನಂತೆ ಮಕ್ಕಳ ಜೊತೆ ವರ್ತಿಸಿದ್ದ ಜಿಲ್ಲಾಧಿಕಾರಿ ಕೆಸರಿನಲ್ಲೂ ಮಕ್ಕಳ ಜೊತೆಗೂಡಿ ಸಂತಸಪಟ್ಟರು. ಸಂಘದ ಅಧ್ಯಕ್ಷ ಅನೀಶ್ ಅಶ್ವತ್ತಡಿ ಅಧ್ಯಕ್ಷತೆ ವಹಿಸಿದ್ದರು. ಡಾ ರೂಪಲತಾ ಕೊಂಗಲಾಯಿ ಧ್ವಜಾರೋಹಣಗೈದರು. ಲಯನ್ಸ್ ಕ್ಲಬ್ ಮಾಣಿ ವಲಯಾಧ್ಯಕ್ಷ ರಾಮ್ ಕಿಶನ್ ರೈ ಉದ್ಘಾಟಿಸಿದರು. ಕೆಸರುಗದ್ದೆ ಕ್ರೀಡಾಕೂಟವನ್ನು ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಹಾಗೂ ವಿಠಲ ಕೋಟ್ಯಾನ್ ಪೆÇಯ್ಯೇ ನಡೆಸಿಕೊಟ್ಟರು. 

ಮಾಣಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ, ನಿವೃತ್ತ ಶಿಕ್ಷಕ ರಾಮಣ್ಣ ಗೌಡ ಕೋಂಗಲಾಯಿ, ನಾರ್ಶ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಗೋಪಾಲಕೃಷ್ಣ ನೇರಳಕಟ್ಟೆ, ವಾಮದಪದವು ಸರಕಾರಿ ಪದವಿಪೂರ್ವ ಕಾಲೇಜಿನ ರಾಧಾಕೃಷ್ಣ ಮೂಲ್ಯ, ಮಲ್ಲರಾಯ ದೈವ ಪರಿಚಾರಕರುಗಳಾದ ರಾಮಣ್ಣ ಗೌಡ, ಬಾಲಪ್ಪ ಮಡಿವಾಳ, ಲಕ್ಷ್ಮಣ ಪೂಜಾರಿ ಬಾಕಿಲ, ಪದ್ಮನಾಭ ಪೂಜಾರಿ ಈಡೆಮುಂಡೆವು ಮೊದಲಾದವರು ಭಾಗವಹಿಸಿದ್ದರು. 

ಕೆಸರು ಗದ್ದೆಯಲ್ಲಿ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ, ವಿವಿಧ ಕ್ರೀಡಾಕೂಟಗಳನ್ನು ನಡೆಸಲಾಯಿತು. ಇದೇ ವೇಳೆ ನಮ್ಮ ತುಳುವ ಸಂಸ್ಕೃತಿಯ ಚಾಪೆ ನೇಯುವುದು, ಬುಟ್ಟಿ ಹೆಣೆಯುವುದು, ಮುಟ್ಟಾಳೆ ಕಟ್ಟುವುದು, ತೆಂಗಿನಗರಿ ನೇಯುವುದು, ಅಕ್ಕಿ ಮುಡಿ ಕಟ್ಟುವ ಪ್ರಾತ್ಯಕ್ಷಿಕೆ ನಡೆಸಲಾಯಿತು. ಯತೀಶ್ ಪೂಂಜಾವ್ ಸ್ವಾಗತಿಸಿ, ವೆಂಕಟೇಶ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಅನಂತಾಡಿಯಲ್ಲಿ ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು ಕಾರ್ಯಕ್ರಮ : ಮಕ್ಕಳೊಂದಿಗೆ ಕೆಸರಾಟವಾಡಿ ಮನರಂಜಿಸಿದ ಮಕ್ಕಳ ಪ್ರೀತಿಯ ಡೀಸಿ ಮುಲ್ಲೈ ಮುಹಿಲನ್ Rating: 5 Reviewed By: karavali Times
Scroll to Top