ಬಂಟ್ವಾಳ, ಸೆಪ್ಟೆಂಬರ್ 14, 2024 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಗ್ರಾಮ ಸಹಾಯಕರ ಸಂಘದ ಅಧ್ಯಕ್ಷರಾಗಿ ಯತೀಶ್ ಹಡೀಲು ಆಯ್ಕೆಯಾಗಿದ್ದಾರೆ.
ಬಿ ಸಿ ರೋಡಿನ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಗೌರವಾಧ್ಯಕ್ಷರಾಗಿ ಜಗನ್ನಾಥ ಅಳಿಕೆ, ಉಪಾಧ್ಯಕ್ಷರಾಗಿ ನವೀನ್ ಎನ್ ದೇವಾಡಿಗ, ಗೌರವ ಸಲಹೆಗಾರರಾಗಿ ಮೋಹನ್ ದಾಸ್ ಕೊಟ್ಟಾರಿ ಕಲ್ಲಡ್ಕ, ಕಾರ್ಯದರ್ಶಿಯಾಗಿ ಸತೀಶ್ ಸಿದ್ಧಕಟ್ಟೆ., ಜೊತೆ ಕಾರ್ಯದರ್ಶಿಯಾಗಿ ಉಷಾ ಪಿಲಾತಬೆಟ್ಟು, ಕೋಶಾಧಿಕಾರಿಯಾಗಿ ಗಣೇಶ್ ಕೇಪು ಅವರನ್ನು ಆರಿಸಲಾಯಿತು.
0 comments:
Post a Comment