ಬಂಟ್ವಾಳ, ಸೆಪ್ಟೆಂಬರ್ 18, 2024 (ಕರಾವಳಿ ಟೈಮ್ಸ್) : ಕಾಲೇಜು ವಿದ್ಯಾರ್ಥಿ ಬಸ್ಸು ಹತುತ್ತಿದ್ದ ವೇಳೆ ಚಾಲಕ ನಿರ್ಲಕ್ಷ್ಯದಿಂದ ಮುಂದಕ್ಕೆ ಚಲಾಯಿಸಿದ ಪರಿಣಾಮ ಕೆಳಗೆ ಬಿದ್ದು ಗಾಯಗೊಂಡ ಘಟನೆ ಬಿ ಸಿ ರೋಡು ಬಸ್ಸು ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಗಾಯಗೊಂಡ ವಿದ್ಯಾರ್ಥಿಯನ್ನು ರೋಹನ್ ಪಿಂಟೋ (18) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಆತನ ಸ್ನೇಹಿತ, ಮೂಡುನಡುಗೋಡು ನಿವಾಸಿ ಆಸ್ಟಲ್ ಲೋಬೋ (18) ಎಂಬಾತ ಬಂಟ್ವಾಳ ಸಂಚಾರಿ ಪೊಲೀಸರಿಗೆ ದೂರು ನೀಡಿದ್ದು, ಬುಧವಾರ ಬೆಳಿಗ್ಗೆ ಸ್ನೇಹಿತರಾದ ಐನಿಶ್ ಕ್ರಾಸ್ತಾ ಹಾಗೂ ರೋಹನ್ ಪಿಂಟೋ ಎಂಬವರೊಂದಿಗೆ, ಬಿ ಸಿ ರೋಡು ಬಸ್ಸು ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾಗ ಮಂಗಳೂರು ಕಡೆಗೆ ಹೋಗುವ ಕೆಎ21 ಎಫ್ 0149 ನೋಂದಣಿ ಸಂಖ್ಯೆಯ ಕೆ ಎಸ್ ಆರ್ ಟಿ ಸಿ ಬಸ್ ಬಂದಿರುತ್ತದೆ. ಈ ಸಂದರ್ಭ ನನ್ನ ಜೊತೆಯಲ್ಲಿದ್ದ ಸ್ನೇಹಿತ ರೋಹನ್ ಪಿಂಟೋ ಓಡಿ ಹೋಗಿ ಸದ್ರಿ ಬಸ್ಸನ್ನು ಹಿಂಬದಿ ಬಾಗಿಲಿನ ಮೂಲಕ ಹತ್ತುತ್ತಿರುವಾಗ, ಏಕಾಏಕಿ ಬಸ್ಸನ್ನು ಚಾಲಕ ಶ್ರೀಕಾಂತ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮುಂದಕ್ಕೆ ಚಲಾಯಿಸಿದ ಪರಿಣಾಮ, ಎದುರು ನಿಂತಿದ್ದ ಖಾಸಗಿ ಬಸ್ಸಿನ ಬಲಬದಿಯ ಭಾಗಕ್ಕೆ ಕೆ ಎಸ್ ಆರ್ ಟಿ ಸಿ ಬಸ್ಸಿನ ಎಡಬದಿಯ ಹಿಂಬದಿಯ ಭಾಗ ತಾಗಿರುತ್ತದೆ. ಈ ವೇಳೆ ಹಿಂಬದಿಯ ಬಾಗಿಲಿನ ಮೂಲಕ ಬಸ್ಸನ್ನು ಹತ್ತುತ್ತಿದ್ದ ಸ್ನೇಹಿತ ರೋಹನ್ ಪಿಂಟೋ ರಸ್ತೆಗೆ ಬಿದ್ದು ಗಾಯಗೊಂಡಿದ್ದಾನೆ. ಆತನನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆಯಂತೆ ಮಂಗಳೂರು ಕಂಕನಾಡಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment