ಬಂಟ್ವಾಳ, ಸೆಪ್ಟೆಂಬರ್ 13, 2024 (ಕರಾವಳಿ ಟೈಮ್ಸ್) : ನಿವೃತ್ತ ಸೈನಿಕನ ಲಕ್ಷಾಂತರ ರೂಪಾಯಿ ಹಣವಿದ್ದ ಹ್ಯಾಂಡ್ ಬ್ಯಾಗನ್ನು ಬ್ಯಾಂಕಿನಿಂದಲೇ ಎಗರಿಸಿದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ನಿವಾಸಿ ಅಂಬ್ರೋಸ್ ಡಿ’ಸೋಜ (72) ಎಂಬವರೇ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ನಿವೃತ್ತ ಸೈನಿಕ. ಇವರು ಸೆ 4 ರಂದು ಬೆಳಿಗ್ಗೆ 50 ಸಾವಿರ ರೂಪಾಯಿ ನಗದು ಹಣವಿದ್ದ ತನ್ನ ಪರ್ಸನ್ನು ಹ್ಯಾಂಡ್ ಬ್ಯಾಗಿನಲ್ಲಿರಿಸಿ ಮನೆಯಿಂದ ಹೊರಟು ಬಿ ಸಿ ರೋಡಿನಲ್ಲಿ ತನ್ನ ಖಾತೆ ಹೊಂದಿರುವ ಬ್ಯಾಂಕಿಗೆ ತೆರಳಿ, ಬ್ಯಾಂಕಿನಿಂದ ಮತ್ತೆ 80 ಸಾವಿರ ರೂಪಾಯಿ ಹಣವನ್ನು ಡ್ರಾ ಮಾಡಿ, ಅದೇ ಹ್ಯಾಂಡ್ ಬ್ಯಾಗಿನಲ್ಲಿ ಇರಿಸಿರುತ್ತಾರೆ. ಬಳಿಕ ಹ್ಯಾಂಡ್ ಬ್ಯಾಗನ್ನು ಬ್ಯಾಂಕಿನ ಟೇಬಲ್ ಮೇಲಿರಿಸಿ, ಪಾಸ್ ಬುಕ್ ಎಂಟ್ರಿ ಮಾಡಿಸಿ ಮರಳಿ ಹ್ಯಾಂಡ್ ಬ್ಯಾಗ್ ತೆಗೆದುಕೊಳ್ಳಲು ಬಂದಾಗ, ಇರಿಸಿದ್ದ ಸ್ಥಳದಲ್ಲಿ ಹ್ಯಾಂಡ್ ಬ್ಯಾಗ್ ಕಾಣದಾಗಿದೆ. ಬ್ಯಾಂಕ್ ಒಳಗಡೆ ಹುಡುಕಾಡಿ ವಿಚಾರಿಸಿದರೂ ಬ್ಯಾಗ್ ಸಿಕ್ಕಿರುವುದಿಲ್ಲ.
ಬಳಿಕ ಹಣ, ಪಾಸ್ ಬುಕ್ ಹಾಗೂ ಇತರೆ ದಾಖಲೆಗಳಿದ್ದ ಹ್ಯಾಂಡ್ ಬ್ಯಾಗ್ ಬಿ ಸಿ ರೋಡು-ಕೈಕುಂಜೆ ರಸ್ತೆ ಬದಿಯಲ್ಲಿ ಪತ್ತೆಯಾಗಿದೆ. ಆದರೆ ಅದರಲ್ಲಿದ್ದ ನಗದು ಹಣ ಸಿಕ್ಕಿರುವುದಿಲ್ಲ. ನಿವೃತ್ತ ಸೈನಿಕನ ಒಟ್ಟು 1.30 ಲಕ್ಷ ರೂಪಾಯಿ ನಗದು ಹಣವನ್ನು ಯಾರೋ ಕಳವು ಮಾಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment