ಉಪ್ಪಿನಂಗಡಿ, ಸೆಪ್ಟೆಂಬರ್ 22, 2024 (ಕರಾವಳಿ ಟೈಮ್ಸ್) : ಅಡಿಕೆ ತೋಟದಲ್ಲಿ ನಡೆಯುತ್ತಿದ್ದ ಅಕ್ರಮ ಜಾನುವಾರು ವಧಾ ಸ್ಥಳಕ್ಕೆ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸರು ಮಾಂಸ ಸಹಿತ ಕೃತ್ಯಕ್ಕೆ ಬಳಸಿದ ಇತರ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಪುತ್ತೂರು ತಾಲೂಕು 34ನೇ ನೆಕ್ಕಿಲಾಡಿ ಗ್ರಾಮದ ಆದರ್ಶಘ ನಗರದ ಕಜೆ ಎಂಬಲ್ಲಿ ಶನಿವಾರ ಮಧ್ಯಾಹ್ನ ವೇಳೆಗೆ ನಡೆದಿದೆ. ದಾಳಿ ವೇಳೆ ಆರೋಪಿಗಳು ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ನಿವಾಸಿ ಶ್ರೀಮತಿ ಖತೀಜಮ್ಮ ಎಂಬವರ ಅಡಿಕೆ ತೋಟದಲ್ಲಿ ಅಕ್ರಮವಾಗಿ ಜಾನುವಾರನ್ನು ಕಡಿದು ಮಾಂಸ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ, ಉಪ್ಪಿನಂಗಡಿ ಪೆÇಲೀಸ್ ಠಾಣಾ ಪಿಎಸ್ಸೈ ಅವಿನಾಶ್ ಎಚ್ ಅವರ ನೇತೃತ್ವದ ಪೊಲೀಸರು ಈ ದಾಳಿ ಸಂಘಟಿಸಿದ್ದಾರೆ.
ದಾಳಿ ವೇಳೆ ಕೃತ್ಯದಲ್ಲಿ ತೊಡಗಿದ್ದ ಆರೋಪಿಗಳಾದ ರಫೀಕ್, ನಝೀರ್, ಉಬೈದ್, ಅಶ್ರಫ್ ಹಾಗೂ ನಿಜಾಮುದ್ದೀನ್ ಎಂಬವರುಗಳು ಓಡಿ ಹೋಗಿದ್ದಾರೆ. ಸ್ಥಳದಲ್ಲಿ ಸುಮಾರು 24 ಸಾವಿರ ರೂಪಾಯಿ ಮೌಲ್ಯದ 96 ಕೆಜಿ ದನದ ಮಾಂಸ, ದೇಹದ ಅಂಗಾಂಗಗಳು, ಮಾಂಸ ಮಾಡಲು ಬಳಸಿದ ಚೂರಿಗಳು, ಕಬ್ಬಿಣದ ಎಲೆಕ್ಟ್ರೋನಿಕ್ ತೂಕ ಮಾಪನ ಹಾಗೂ ಇತರ ಸೊತ್ತುಗಳು, 2 ಅಟೋರಿಕ್ಷಾಗಳು, 1 ಮೊಟಾರ್ ಸೈಕಲ್ ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 107/2024 ಕಲಂ 12 ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಮತ್ತು ಕಲಂ 3(5) ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.















0 comments:
Post a Comment