ಬಂಟ್ವಾಳ, ಸೆಪ್ಟೆಂಬರ್ 20, 2024 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ ಇದರ 20 ವರ್ಷ ಪೂರೈಸಿದ ಪ್ರಯುಕ್ತ ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಸಂಯೋಜನೆಯಲ್ಲಿ “ವಿಂಶತಿ ಸಂಭ್ರಮ 2023-24, ವರ್ತಕರ-ಗ್ರಾಹಕರ ಮಹಾಸಂಗಮ”, ಗೃಹೊಪಯೋಗಿ ವಸ್ತುಗಳ ಮಾರಾಟ ಹಾಗೂ ತಿಂಡಿ-ತಿನಿಸುಗಳ ಮಹಾಮೇಳ, ಆರೋಗ್ಯ ತಪಾಸಣೆ, ದಿವ್ಯಾಂಗರ ಸಮಸ್ಯೆಗಳ ಜಾಗೃತಿ ಕಾರ್ಯಕ್ರಮವು ಬಿ ಸಿ ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಶುಕ್ರವಾರ ಉದ್ಘಾಟನೆಗೊಂಡಿತು.
ರೋಟರಿ ಜಿಲ್ಲಾ ಮಾಜಿ ಕಾರ್ಯದರ್ಶಿ ನಾರಾಯಣ ಹೆಗ್ಡೆ ಉದ್ಘಾಟಿಸಿದರು. ರೋಟರಿ ಕ್ಲಬ್ ಬಂಟ್ವಾಳ ಟೌನ್‍ನ ಅಧ್ಯಕ್ಷ ಕಿಶೋರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬಿ ಸಿ ರೋಡು ವಿಕಾಸಂ ಸೇವಾ ಫೌಂಡೇಶನ್ ನಿರ್ದೇಶಕ ಗಣೇಶ್ ಭಟ್ ದಿವ್ಯಾಂಗರ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ರೋಟರಿ ಝೋನ್-4ರ ನಿಕಟಪೂರ್ವ ಸಹಾಯಕ ಗವರ್ನರ್ ರಾಘವೇಂದ್ರ ಭಟ್, ಬಂಟ್ವಾಳ ಪುರಸಭಾ ಸದಸ್ಯ ಹರಿಪ್ರಸಾದ್ ಭಂಡಾರಿಬೆಟ್ಟು, ಸಂಘದ ಉಪಾದ್ಯಕ್ಷ ಮಂಜುನಾಥ ರೈ ಅಗರಿ ಭಾಗವಹಿಸಿದ್ದರು.
ರೋಟರಿ ಕ್ಲಬ್ ಬಂಟ್ವಾಳ ಟೌನ್ ಕಾರ್ಯದರ್ಶಿ ನಾರಾಯಣ ಸಿ ಪೆರ್ನೆ ಸ್ವಾಗತಿಸಿ, ದ ಕ ವರ್ತಕರ ಸಹಕಾರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಪ್ರಸ್ತಾವನೆಗೈದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ಜೈನ್ ಪ್ರಾರ್ಥನೆ ನೆರವೇರಿಸಿದರು. ಡಾ ಸುದೀಪ್ ಕುಮಾರ್ ವಂದಿಸಿ, ನಿರ್ದೇಶಕ ಸುಧಾಕರ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.
0 comments:
Post a Comment