ಬಂಟ್ವಾಳ, ಸೆಪ್ಟೆಂಬರ್ 21, 2024 (ಕರಾವಳಿ ಟೈಮ್ಸ್) : ಶೆಡ್ಡಿನೊಳಗೆ ನಡೆಯುತ್ತಿದ್ದ ಅಕ್ರಮ ಜೂಜಾಟ ಅಡ್ಡೆಗೆ ದಾಳಿ ನಡೆಸಿದ ಪೂಂಜಾಲಕಟ್ಟೆ ಪೊಲೀಸ್ ಠಾಣಾ ಪಿಎಸ್ಸೈ ನಂದಕುಮಾರ್ ನೇತೃತ್ವದ ಪೊಲೀಸರು ಬರೋಬ್ಬರಿ 23 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದು,ಜುಗಾರಿ ಕೃತ್ಯ ನಡೆಸುತ್ತಿದ್ದಾತ ಪೊಲೀಸರ ಕೈಗೆ ಸಿಗದೆ ಪರಾರಿಯಾದ ಘಟನೆ ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಮಡಂತ್ಯಾರು ಪೇಟೆಯ ಬಳಿ ಗುರುವಾರ ನಡೆದಿದೆ.
ಇಲ್ಲಿನ ನಿವಾಸಿ ಅಲ್ಬರ್ಟ್ ಡಿ’ಸೋಜಾ ಎಂಬವರಿಗೆ ಸೇರಿದ ಕಟ್ಟಡದ ಹಿಂಭಾಗದಲ್ಲಿರುವ ಶೆಡ್‍ನೊಳಗೆ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ನಂದಕುಮಾರ್ ನೇತೃತ್ವದ ಪೊಲೀಸರು ದಾಳಿ ನಡೆಸಿದ್ದು, 23 ಮಂದಿಯನ್ನು ದಸ್ತಗಿರಿ ಮಾಡಿದ್ದು, ಜುಗಾರಿ ಕೃತ್ಯ ನಡೆಸುತ್ತಿದ್ದ ಬಿ ಸಿ ರೋಡು ನಿವಾಸಿ ಮೊನಪ್ಪ ಪೂಜಾರಿ ಪರಾರಿಯಾಗಿದ್ದಾನೆ. ದಾಳಿ ವೇಳೆ ಬಂಧಿತ ಆರೋಪಿಗಳಿಂದ ನಗದು ಸಹಿತ ಸುಮಾರು 36,729/- ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕು ಮೂಡುಪಡುಕೋಡಿ ನಿವಾಸಿ ಮೊಹಮ್ಮದ್ ಹೈದರ್ (40), ಉಳಿ ನಿವಾಸಿ ಜೋಸ್ ಥೋಮಸ್ (51), ತೆಂಕಕಜೆಕಾರು ನಿವಾಸಿ ಲೋಕನಾಥ ಬಂಗೇರ (66), ಕಾವಳಮೂಡೂರು ನಿವಾಸಿಗಳಾದ ಯಶೋಧರ (42), ಎಂ ಅಶ್ರಫ್ (47), ಪೆರ್ನೆ ನಿವಾಸಿ ಶ್ರೀಧರ ಪೂಜಾರಿ (59), ನಾವೂರು ನಿವಾಸಿ ಮುನ್ನ ಅಲಿಯಾಸ್ ಮುಸ್ತಫ (48), ಬೆಳ್ತಂಗಡಿ ತಾಲೂಕು ಕುವೆಟ್ಟು ನಿವಾಸಿಗಳಾದ ಅಬ್ದುಲ್ ಖಾದರ್ (39), ಅಬ್ದುಲ್ ರಹಿಮಾನ್ (74), ಅಬೂಬಕ್ಕರ್ ಅಲಿಯಾಸ್ ಗುಜುರಿ ಅಬೂಬಕ್ಕರ್ (45), ಮಜೀದ್ ಯಾನೆ ಅಬ್ದುಲ್ ಮಜೀದ್ (34), ಉಜಿರೆ ನಿವಾಸಿ ಅಬೂಬಕ್ಕರ್ (61), ನ್ಯಾಯತರ್ಪು ನಿವಾಸಿ ತುಕಾರಾಂ (40), ಮಾಲಾಡಿ ನಿವಾಸಿಗಳಾದ ರಮೇಶ ಆಚಾರ್ಯ (52), ಕಮಲಾಕ್ಷದಾಸ್ (50), ಪಡಂಗಡಿ ನಿವಾಸಿಗಳಾದ ಜಿ ಎ ದಾವೂದ್ (40), ಮೊಹಮ್ಮದ್ (54), ವಿಜಯ ಕುಮಾರ್ (35), ಅಬ್ದುಲ್ ರಝಾಕ್ (43), ಲಾಯಿಲ ನಿವಾಸಿಗಳಾದ ರಿಯಾಜ್ ಅಲಿಯಾಸ್ ರಿಯಾಜುದ್ದೀನ್ (36), ಅಬ್ದುಲ್ ರವೂಫ್ (35), ಮುಸ್ತಫಾ (48), ಪುತ್ತೂರು ತಾಲೂಕು ಬಜತ್ತೂರು ನಿವಾಸಿ ರಮೇಶ್ ಕೆ (38) ಎಂದು ಗುರುತಿಸಲಾಗಿದೆ.
ಈ ಬಗ್ಗೆ ನ್ಯಾಯಾಲಯದಿಂದ ಅನುಮತಿ ಪಡೆದು ಸೆ 20 ರಂದು ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 67/2024 ಕಲಂ 79, 80 ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
0 comments:
Post a Comment