ಬಂಟ್ವಾಳ, ಅಕ್ಟೋಬರ್ 21, 2024 (ಕರಾವಳಿ ಟೈಮ್ಸ್) : ದುಬೈ ಉದ್ಯಮಿ ಇಬ್ರಾಹಿಂ ಗಡಿಯಾರ್ ಅವರ ನೇತೃತ್ವದ ಗಡಿಯಾರ್ ಫೌಂಡೇಶನ್ ಇದರ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ಟೈಲರಿಂಗ್ ಮೆಷಿನ್ ವಿತರಣೆ ಹಾಗೂ ಸತ್ತಿಕಲ್ಲು ಸರಕಾರಿ ಶಾಲೆಗೆ ಕಂಪ್ಯೂಟರ್ ವಿತರಣಾ ಕಾರ್ಯಕ್ರಮ ಗಡಿಯಾರ ಮಿಫ್ತಾಹುಲ್ ಉಲೂಂ ಮದ್ರಸ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಗಡಿಯಾರ ಜುಮಾ ಮಸೀದಿ ಖತೀಬ್ ಉಮರ್ ಫೈಝಿ, ಗಡಿಯಾರ ಫೌಂಡೇಶನ್ ಸ್ಥಾಪಕ, ದುಬೈ ಉದ್ಯಮಿ ಇಬ್ರಾಹಿಂ ಗಡಿಯಾರ, ಚೊಯಿಸ್ ಬೀಡಿ ಉದ್ಯಮಿ ಪಿ ಕೆ ಉಮರಬ್ಬ ಸತ್ತಿಕಲ್ಲು, ಕೆದಿಲ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಅಝೀಝ್, ಬುಡೋಳಿ ವಿಸ್ಡಂ ಶಾಲಾ ಸಂಚಾಲಕ ಅಬ್ದುಲ್ ಖಾದರ್ ವಿಟ್ಲ ಮೊದಲಾದವರು ಭಾಗವಹಿಸಿದ್ದರು.
ಗಡಿಯಾರ ಜುಮಾ ಮಸೀದಿ ಅಧ್ಯಕ್ಷ ರಿಯಾಝ್ ಕಲ್ಲಾಜೆ ಸ್ವಾಗತಿಸಿ, ರಫೀಕ್ ಬಾವಾ ಗಡಿಯಾರ ವಂದಿಸಿದರು. ಪಿ ಜೆ ಅಬ್ದುಲ್ ಅಝೀಝ್ ಗಡಿಯಾರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ 10 ಮಂದಿಗೆ ಟೈಲರಿಂಗ್ ಯಂತ್ರ ಹಾಗೂ ಸತ್ತಿಕಲ್ಲು ಸರಕಾರಿ ಶಾಲೆಗೆ ಕಂಪ್ಯೂಟರ್ ವಿತರಿಸಲಾಯಿತು.
0 comments:
Post a Comment