ಸುಳ್ಯ, ಅಕ್ಟೋಬರ್ 30, 2024 (ಕರಾವಳಿ ಟೈಮ್ಸ್) : ಅಡಿಕೆ ಸಂಸ್ಕರಣ ಘಟಕಕ್ಕೆ ಕಳವುಗೈಯಲು ಬಂದ ವ್ಯಕ್ತಿ ಘಟಕದ ಮಾಲಕರಿಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಘಟನೆ ಗಾಂಧಿನಗರದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಕಳ್ಳನನ್ನು ಬಶೀರ್ ಎಂದು ಹೆಸರಿಸಲಾಗಿದೆ. ಇಲ್ಲಿನ ನಿವಾಸಿ ಕೆ ಅಬ್ದುಲ್ ಆರಿಶ್ (50) ಅವರು ಅಲೆಟ್ಟಿ ಗ್ರಾಮದ ಅರಂಬೂರು ಎಂಬಲ್ಲಿ ಅಡಿಕೆ ಗಾರ್ಬಲ್ (ಅಡಿಕೆ ಸಂಸ್ಕರಣ ಘಟಕ) ವನ್ನು ನಡೆಸಿಕೊಂಡಿದ್ದು, ಅ 28 ರಂದು ರಾತ್ರಿ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿರುತ್ತಾರೆ. ಅ 29ರಂದು ಮುಂಜಾನೆ ಅಂಗಡಿ ಕಟ್ಟಡದ ಮಾಲಿಕರು ಕರೆಮಾಡಿ ಅಂಗಡಿಯ ಒಳಗಡೆ ಯಾರೋ ಇರುವ ಬಗ್ಗೆ ತಿಳಿಸಿದ್ದಾರೆ. ಅದರಂತೆ ಆರಿಶ್ ಅವರು ಇಬ್ಬರು ಸ್ನೇಹಿತರೊಂದಿಗೆ ತೆರಳಿ ಅಂಗಡಿಯ ಒಳಗೆ ಹುಡುಕಿದಾಗ ಅಡಿಕೆ ತುಂಬಿಸಿದ್ದ ಚೀಲಗಳ ನಡುವೆ ವ್ಯಕ್ತಿಯೊಬ್ಬ ಅವಿತುಕೊಂಡಿರುವುದು ಕಂಡುಬಂದಿದೆ.
ಆತನನ್ನು ವಿಚಾರಿಸಿದಾಗ ಆತನ ಹೆಸರು ಬಶೀರ್ ಎಂದು ತಿಳಿಸಿ ತಾನು ಅಡಿಕೆ ಕದಿಯುವ ಸಲುವಾಗಿ ಗಾರ್ಬಲ್ ಗೋಡೆಯಲ್ಲಿ ಅಳವಡಿಸಿರುವ ಕಬ್ಬಿಣದ ಜಾಲರಿಯನ್ನು ತುಂಡು ಮಾಡಿ ಒಳಗೆ ಬಂದಿರುವುದಾಗಿ ತಿಳಿಸಿರುತ್ತಾನೆ. ಆತನು ಅಂಗಡಿಯ ಒಳಗೆ 2 ಪಾಲಿಥೀನ್ ಚೀಲಗಳಿಗೆ ಅಡಿಕೆ ತುಂಬಿಸಿ ಇಟ್ಟಿರುವುದು ಹಾಗೂ ಮತ್ತೆರಡು ಚೀಲಗಳಿಗೆ ಅಡಿಕೆ ತುಂಬಿಸಿ ಆತನು ನಿಲ್ಲಿಸಿದ್ದ ಕಾರಿನಲ್ಲಿ ಇಟ್ಟಿರುವುದು ಕಂಡು ಬಂದಿರುತ್ತದೆ. ಈತ ಕಳ್ಳತನ ಮಾಡಿರುವ ಅಡಿಕೆಯ ಒಟ್ಟು ಮೌಲ್ಯ 15 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸುಳ್ಯ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment