ಬೆಳ್ತಂಗಡಿ, ಅಕ್ಟೋಬರ್ 30, 2024 (ಕರಾವಳಿ ಟೈಮ್ಸ್) : ಮನೆ ಯಜಮಾನಿ ತವರು ಮನೆಗೆ ಹೋದಾಗ ಒಳನುಗ್ಗಿದ ಕಳ್ಳರು ಸಾವಿರಾರು ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣವನ್ನು ಕಳವುಗೈದ ಘಟನೆ ಅಂಡಿಂಜೆ ಗ್ರಾಮದಲ್ಲಿ ಸೋಮವಾರ ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ ಶ್ರೀಮತಿ ಸುಜಾತ ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಇವರು ಮನೆಗೆ ಬೀಗ ಹಾಕಿ ತವರು ಮನೆಯಾದ ಅಳಿಯೂರು ಎಂಬಲ್ಲಿ ತೆರಳಿದ್ದಾಗ ಅ 27 ರ ಸಂಜೆಯಿಂದ ಅ 28ರ ಮದ್ಯಾಹ್ನದ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿ ಮನೆಯ ಗೋದ್ರೇಜ್ ಕಪಾಟಿನಲ್ಲಿದ್ದ 25 ಸಾವಿರ ರೂಪಾಯಿ ನಗದು ಹಣ ಹಾಗೂ 9 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವುಗೈದಿದ್ದಾರೆ. ನಗದು ಸೇರಿ ಕಳವಾದ ಸೊತ್ತುಗಳ ಮೌಲ್ಯ 80 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವೇಣೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment