ಬಂಟ್ವಾಳ, ಮಾರ್ಚ್ 19, 2025 (ಕರಾವಳಿ ಟೈಮ್ಸ್) : ಜಕ್ರಿಬೆಟ್ಟು ಎಂಬಲ್ಲಿ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ಎರಡೂ ವಾಹನಗಳ ಸವಾರರು ಗಾಯಗೊಂಡಿದ್ದಾರೆ.
ಗಾಯಾಳು ಸವಾರರನ್ನು ಬಡಗಕಜೆಕಾರು ನಿವಾಸಿ ಕೇಶವ (37) ಹಾಗೂ ಇಬ್ರಾಹಿಂ ಎಂದು ಹೆಸರಿಸಲಾಗಿದೆ. ಕೇಶವ ಅವರು ತನ್ನ ಬೈಕಿನಲ್ಲಿ ಪುಂಜಾಲಕಟ್ಟೆ ಕಡೆಯಿಂದ ಬಿ ಸಿ ರೋಡು ಕಡೆಗೆ ತೆರಳುತ್ತಿದ್ದ ವೇಳೆ ಬಂಟ್ವಾಳ ಪೇಟೆ ಒಳ ರಸ್ತೆಯಿಂದ ಇಬ್ರಾಹಿಂ ಎಂಬವರು ಚಲಾಯಿಸಿಕೊಂಡು ಬಂದ ಸ್ಕೂಟರ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಪರಿಣಾಮ ಕೇಶವ ಅವರ ಕೈಗೆ, ಭುಜಕ್ಕೆ ಗಾಯಗಳಾಗಿದ್ದು, ಇಬ್ರಾಹಿಂ ಅವರ ತಲೆಗೆ ಗಾಯವಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment