ಬಂಟ್ವಾಳ, ಮಾರ್ಚ್ 19, 2025 (ಕರಾವಳಿ ಟೈಮ್ಸ್) : ವ್ಯಕ್ತಿಯೋರ್ವರಿಗೆ ಏಳು ಮಂದಿಯ ತಂಡವೊಂದು ಹಲ್ಲೆ ನಡೆಸಲು ಯತ್ನಿಸಿ ಜೀವಬೆದರಿಕೆ ಒಡ್ಡಿದ ಘಟನೆ ಬಿ ಸಿ ರೋಡು ಬಸ್ ನಿಲ್ದಾಣದ ಬಳಿಯ ಫ್ಲೈ ಓವರ್ ಕೆಳಗೆ ಭಾನುವಾರ ರಾತ್ರಿ ನಡೆದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ಬೈಪಾಸ್ ನಿವಾಸಿ ಸುಜೀತ್ ಪೂಜಾರಿ (20) ಅವರೇ ಹಲ್ಲೆಗೊಳಗಾದ ವ್ಯಕ್ತಿ. ಆರೋಪಿಗಳನ್ನು ಪರಿಚಯದ ಭುವಿತ್ ಶೆಟ್ಟಿ, ಪುಷ್ಪರಾಜ್ ಅಲೆತ್ತೂರು, ಕುಟ್ಟ, ಅಶ್ವಥ್ ಅಲೆತ್ತೂರು ಇತರ ಮೂವರು ಮುಖಪರಿಚಯ ಇರುವವರು ಎಂದು ದೂರಲಾಗಿದೆ.
ಸುಜೀತ್ ಪೂಜಾರಿ ಅವರು ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು, ಮಾರ್ಚ್ 4 ರಂದು ಬಂಟ್ವಾಳ ವೆಂಕಟರಮಣ ದೇವಸ್ಥಾನದ ಜಾತ್ರೆಗೆಂದು ಹೋಗಿದ್ದ ವೇಳೆ ಆರೋಪಿ ಭುವಿತ್ ಶೆಟ್ಟಿ ಹಾಗೂ ಆತನ ಸ್ನೇಹಿತರಾಗಿರುವ ಕುಟ್ಟ ಮತ್ತು ಇತರ ಮುಖ ಪರಿಚಯದ ವ್ಯಕ್ತಿಗಳು ವಿನಾ ಕಾರಣ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಲು ಬಂದಿರುತ್ತಾರೆ. ಅದರೆ ಸುಜೀತ್ ಪೂಜಾರಿ ಏನು ಮಾತನಾಡದೆ ದೇವರ ಪ್ರಸಾದ ಸ್ವೀಕರಿಸಿ ಹೆದರಿಕೆಯಿಂದ ಮನೆಗೆ ತೆರಳಿದ್ದರು.
ಇದರ ಮುಂದುವರಿದ ಭಾಗವಾಗಿ ಮಾರ್ಚ್ 16 ರಂದು ರಜಾ ದಿನವಾಗಿದ್ದ ಭಾನುವಾರ ಸುಜಿತ್ ಅವರು ರಾತ್ರಿ 8 ಗಂಟೆಗೆ ತನ್ನ ಸಂಬಳದ ಬಾಬ್ತು ಹಣವನ್ನು ಪಡೆದುಕೊಳ್ಳಲು ಬಿ ಸಿ ರೋಡ್ ಖಾಸಗಿ ಬಸ್ಸು ತಂಗುದಾಣದ ಸಮೀಪ ಫೈ ಓವರ್ ಕೆಳಗೆ ನಿಂತುಕೊಂಡಿದ್ದಾಗ ಆರೋಪಿಗಳು ಹೋಟೆಲ್ ಸನ್ಮಾನ್ ಕಡೆಯಿಂದ ಬಂದು ತುಳು ಭಾಷೆಯಲ್ಲಿ “ಮುರಾನಿ ತಪ್ಪಾದ್ ಪೊಯ ನಿನನ್ ಕೆರಂದೆ ಬುಡಯೆ” ಎಂದು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಲು ಬಂದಿದ್ದಲ್ಲದೆ ಸುಜಿತ್ ಅವರ ತಂದೆ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment