ಬಂಟ್ವಾಳ, ಮಾರ್ಚ್ 19, 2025 (ಕರಾವಳಿ ಟೈಮ್ಸ್) : ಬಿ ಸಿ ರೋಡು ಸಮೀಪದ ಕೈಕಂಬದ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಮಟ್ಕಾ ಅಡ್ಡೆಗೆ ದಾಳಿ ನಡೆಸಿರುವ ಬಂಟ್ವಾಳ ನಗರ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಾರ್ಚ್ 17 ರಂದು ಬಿ ಮೂಡ ಗ್ರಾಮದ ಕೈಕಂಬ ಎಂಬಲ್ಲಿನ ರಾಜಶ್ರೀ ಕಟ್ಟಡದ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂಕೆ ಸಂಖ್ಯೆಗಳ ಮೇಲೆ ಹಣವನ್ನು ಪಣವನ್ನಾಗಿರಿಸಿಕೊಂಡು ಮಟ್ಕಾ ಚೀಟಿ ಬರೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳಾದ ಮಟ್ಕಾ ಚೀಟಿ ಬರೆಯುತ್ತಿದ್ದ ಸುರೇಶ್ ಪ್ರಾಯ (43) ಹಾಗೂ ಮಟ್ಕಾ ಚೀಟಿ ಪಡೆಯುತ್ತಿದ್ದ ಭಾಸ್ಕರ್ (60) ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರದಿಂದ ಮಟ್ಕಾ ಚೀಟಿ ಪುಸ್ತಕ, ಮಟ್ಕಾ ಚೀಟಿ, 3,770/- ರೂಪಾಯಿ ನಗದು ಹಣ ಸಹಿತ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment