ಬಂಟ್ವಾಳ, ಎಪ್ರಿಲ್ 28, 2025 (ಕರಾವಳಿ ಟೈಮ್ಸ್) : ಹೆದ್ದಾರಿ ದಾಟುತ್ತಿದ್ದ ಮಹಿಳೆಗೆ ಬೈಕ್ ಡಿಕ್ಕಿಯಾಗಿ ಗಾಯಗೊಂಡ ಘಟನೆ ಬಿ ಮೂಡ ಗ್ರಾಮದ ಶಾಂತಿಅಂಗಡಿ ಎಂಬಲ್ಲಿ ಶನಿವಾರ ಸಂಭವಿಸಿದೆ.
ಗಾಯಗೊಂಡ ಮಹಿಳೆಯನ್ನು ಮಂಚಿ ಗ್ರಾಮದ ಬಾಲಾಜಿಬೈಲು ನಿವಾಸಿ ಬೀಫಾತುಮ್ಮ ಎಂದು ಹೆಸರಿಸಲಾಗಿದೆ. ಇವರು ಶನಿವಾರ ಶಾಂತಿಅಂಗಡಿ ಎಂಬಲ್ಲಿ ಹೆದ್ದಾರಿಯ ಒಂದು ಬದಿಯಿಂದ ಡಿವೈಡರ್ ದಾಟಿ ಇನ್ನೊಂದು ಕಡೆಗೆ ಬಂದು ಹೆದ್ದಾರಿ ಬದಿ ನಿಂತಿದ್ದಾಗ ಪಿ ಬಿ ಫಕ್ರುದ್ದೀನ್ ರಾಝಿ ಎಂಬವರು ಚಲಾಯಿಸಿಕೊಂಡು ಬಂದ ಬೈಕ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ರಸ್ತೆಗೆ ಬಿದ್ದು ಕಾಲು ಹಾಗೂ ತಲೆಗೆ ಗಾಯಗೊಂಡ ಬೀಫಾತುಮ್ಮ ಅವರನ್ನು ತಕ್ಷಣ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment