ಬಂಟ್ವಾಳ, ಎಪ್ರಿಲ್ 28, 2025 (ಕರಾವಳಿ ಟೈಮ್ಸ್) : ತುಂಬೆ ಗ್ರಾಮದ ರಾಮಲ್ ಕಟ್ಟೆ ಎಂಬಲ್ಲಿ ಹೆದ್ದಾರಿ ಪಕ್ಕದಲ್ಲಿ ಮಧ್ಯವಯಸ್ಕ ಗಂಡಸಿನ ಮೃತದೇಹ ಶನಿವಾರ ಅಪರಾಹ್ನ ಪತ್ತೆಯಾಗಿದೆ.
ಈ ಬಗ್ಗೆ ಪುದು ಗ್ರಾಮದ ಫರಂಗಿಪೇಟೆ ಸಮೀಪದ ಕುಂಪಣಮಜಲು ನಿವಾಸಿ ವಝಿರ ಭಾಷಾ ಅವರು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಇವರು ಶನಿವಾರ ಅಪರಾಹ್ನ 3 ಗಂಟೆ ವೇಳೆಗೆ ಮಂಗಳೂರಿನಿಂದ ಕೆಲಸ ಮುಗಿಸಿ ತನ್ನ ಹೆಂಡತಿಯ ತಂಗಿಯ ಮನೆಯಾದ ಕಲ್ಲಡ್ಕಕ್ಕೆ ಹೋಗುತ್ತಿದ್ದಾಗ ತುಂಬೆ ಗ್ರಾಮದ ರಾಮಲಕಟ್ಟೆ ಎಂಬಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಸುಮಾರು 42-45 ವರ್ಷದ ಗಂಡಸಿನ ಮೃತ ದೇಹವು ಕಂಡುಬಂದಿದೆ. ಮೃತರು ಯಾವುದೋ ಖಾಯಿಲೆ ಉಲ್ಭಣಗೊಂಡು ಅಥವಾ ಬೇರೆ ಇನ್ನಾವುದೋ ಕಾರಣದಿಂದ ಮೃತಪಟ್ಟಿರಬಹುದು ಎಂದು ಅವರು ನೀಡಿದ ದೂರಿನ ಮೇರೆಗೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
0 comments:
Post a Comment