ಬೆಳ್ತಂಗಡಿ, ಎಪ್ರಿಲ್ 26, 2025 (ಕರಾವಳಿ ಟೈಮ್ಸ್) : ತಾಲೂಕಿನ ಬಂಗಾಡಿ-ಇಂದಬೆಟ್ಟು ಸಮೀಪದ ಕಿಲ್ಲೂರು ನಿವಾಸಿ, ಪಾಣೆಮಂಗಳೂರು ಸಮೀಪದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಅಲ್‍ಹಾಜ್ ಬಿ ಎಚ್ ಅಬೂಸ್ವಾಲಿಹ್ ಮುಸ್ಲಿಯಾರ್ ಅವರ ಸುಪುತ್ರ ಬಿ ಎ ಮುಹಮ್ಮದ್ ಅಲ್ತಾಫ್ ಅವರ ವಿವಾಹವು ಮೂರುಗೋಳಿ-ಬೇಂಗಿಲ ಸಮೀಪದ ಕೆದಿಲ ನಿವಾಸಿ ಇಸ್ಮಾಯಿಲ್ ಸಅದಿ ಅವರ ಪುತ್ರಿ ಹನ್ನತ್ ಮರ್ಯಂ ರುಝ್‍ನಾ ಎಂಬ ವಧುವಿನೊಂದಿಗೆ ಎಪ್ರಿಲ್ 26 ರಂದು ಶನಿವಾರ ಸ್ವಗೃಹ ಕಿಲ್ಲೂರು ದಾರುಶ್ಶರೀಫ್ ಮಂಝಿಲ್ ನಿವಾಸದಲ್ಲಿ ನೆರವೇರಿತು.
ಖುದುವತುಸ್ಸಾದಾತ್ ಅಸ್ಸಯ್ಯದ್ ಆಟಕೋಯ ತಂಙಳ್ ಕುಂಬೋಳ್ ಅವರು ನಿಖಾಹ ನೆರವೇರಿಸಿದರು. ಶೈಖುನಾ ಬಿ ಎಚ್ ಅಬೂಸ್ವಾಲಿಹ್ ಉಸ್ತಾದ್, ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್, ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು, ಸಯ್ಯಿದ್ ಬದ್ರುದ್ದೀನ್ ತಂಙಳ್ ಪೊಮ್ಮಾಜೆ, ಪೆರ್ನೆ ಉಸ್ತಾದ್ (ಅಬ್ಬಾಸ್ ಸಅದಿ), ರಾಜ್ಯ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಎನ್ ಕೆ ಎಂ ಶಾಫಿ ಸಅದಿ, ಕಾರ್ಕಳ-ಬಂಗ್ಲೆಗುಡ್ಡೆ ತ್ವೈಬಾ ಗಾರ್ಡನ್ ಪ್ರಾಂಶುಪಾಲ ಬಿ ಎ ಶರೀಫ್ ಸಅದಿ ಅಲ್-ಕಾಮಿಲಿ ಕಿಲ್ಲೂರು, ಜಂ-ಇಯ್ಯತು ಮಿಸ್ಬಾಹಿಲ್ ಹುದಾ ಅಧ್ಯಕ್ಷ ಹಾಜಿ ಎನ್ ಎಚ್ ಆದಂ ಫೈಝಿ ನೆಹರುನಗರ, ಕಾರ್ಯದರ್ಶಿ ಪಿ ಎಸ್ ತ್ವಾಹಾ ಸಅದಿ ಮೊದಲಾದ ಗಣ್ಯರು ಭಾಗವಹಿಸಿ ನೂತನ ವಧೂ-ವರರಿಗೆ ಶುಭ ಹಾರೈಸಿದರು.
0 comments:
Post a Comment