ಪಹಲ್ಗಾಮ್ ಪ್ರವಾಸಿಗರ ಮೇಲೆ ದಾಳಿ ಖಂಡಿಸಿ ದ.ಕ. ಕಾಂಗ್ರೆಸ್ ವತಿಯಿಂದ ಮೊಂಬತ್ತಿ ಶ್ರದ್ದಾಂಜಲಿ - Karavali Times ಪಹಲ್ಗಾಮ್ ಪ್ರವಾಸಿಗರ ಮೇಲೆ ದಾಳಿ ಖಂಡಿಸಿ ದ.ಕ. ಕಾಂಗ್ರೆಸ್ ವತಿಯಿಂದ ಮೊಂಬತ್ತಿ ಶ್ರದ್ದಾಂಜಲಿ - Karavali Times

728x90

25 April 2025

ಪಹಲ್ಗಾಮ್ ಪ್ರವಾಸಿಗರ ಮೇಲೆ ದಾಳಿ ಖಂಡಿಸಿ ದ.ಕ. ಕಾಂಗ್ರೆಸ್ ವತಿಯಿಂದ ಮೊಂಬತ್ತಿ ಶ್ರದ್ದಾಂಜಲಿ

 ಮಂಗಳೂರು, ಎಪ್ರಿಲ್ 25, 2025 (ಕರಾವಳಿ ಟೈಮ್ಸ್) : ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸಿದ ಭೀಕರ ದಾಳಿಯನ್ನು ಖಂಡಿಸಿ ಮತ್ತು ಹುತಾತ್ಮರಾದವರಿಗೆ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದ ಎದುರು ಶುಕ್ರವಾರ ಮೊಂಬತ್ತಿ ಹಿಡಿದು ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ ಅವರು, ಅಮಾಯಕರ ಮೇಲೆ ಭಯೋತ್ಪಾದಕರು ಅತ್ಯಂತ ಅಮಾನುಷವಾಗಿ ಗುಂಡಿಕ್ಕಿ ಹತ್ಯೆ ಮಾಡಿರುವುದು ಖಂಡನೀಯ. ಇಂತಹ ಕೃತ್ಯದಿಂದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯುಂಟಾಗುತ್ತದೆ. ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕು. ಮೃತರ ಆತ್ಮಕ್ಕೆ  ಭಗವಂತ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ, ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು. 

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಮಾತನಾಡಿ, ಭಾರತದ ಏಕತೆಯನ್ನು ಸಹಿಸದ ಪಾಕಿಸ್ತಾನ ಕಾಶ್ಮೀರದ ಪ್ರವಾಸಿಗರ ಮೇಲೆ ಘನಗೋರ ಕೃತ್ಯ ಎಸಗಿದೆ. ಭಯೋತ್ಪಾದನೆಗೆ ಜಾತಿ-ಧರ್ಮವಿಲ್ಲ. ದೇಶದಲ್ಲಿ ಭಯೋತ್ಪಾದಕ ಕೃತ್ಯಗಳು ನಿಲ್ಲಬೇಕು ಮತ್ತು ಅಮಾಯಕ ಜೀವಗಳು ಬಲಿಯಾಗುವುದನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಭಯೋತ್ಪಾದಕರ ಹೇಯ ಕೃತ್ಯದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಎಂದರು. 

ಮಾಜಿ ಶಾಸಕ ಜೆ.ಆರ್. ಲೋಬೊ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೊ ಮಾತನಾಡಿದರು. 

ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಮಾಜಿ ಮೇಯರ್ ಗಳಾದ ಶಶಿಧರ್ ಹೆಗ್ಡೆ, ಭಾಸ್ಕರ್ ಕೆ, ಮುಖಂಡರಾದ ಬಿ ಎಂ ಅಬ್ಬಾಸ್ ಅಲಿ, ಕೆ.ಪಿ. ಥೋಮಸ್, ಅಶ್ರಫ್ ಕೆ, ಕೆ ಅಪ್ಪಿ, ಪ್ರವೀಣ್ ಚಂದ್ರ ಆಳ್ವ, ನವೀನ್ ಡಿ ಸೋಜಾ, ಟಿ ಹೊನ್ನಯ್ಯ, ನೀರಜ್ ಚಂದ್ರಪಾಲ್, ಟಿ.ಕೆ. ಸುಧೀರ್, ವಿಕಾಶ್ ಶೆಟ್ಟಿ, ಬೇಬಿ ಕುಂದರ್, ಅಬ್ದುಲ್ ರವೂಫ್, ಶುಭೋದಯ ಆಳ್ವ, ಅಶ್ರಫ್ ಬಜಾಲ್, ಜೋಕಿಂ ಡಿಸೋಜಾ, ವಿಶ್ವಾಸ್ ಕುಮಾರ್ ದಾಸ್, ಗಿರೀಶ್ ಶೆಟ್ಟಿ, ಯು.ಟಿ. ಫರ್ಝಾನ, ಬಾಲಕೃಷ್ಣ ಅಂಚನ್, ಕೇಶವ ಮರೋಳಿ, ಶಂಸುದ್ದೀನ್ ಕುದ್ರೋಳಿ, ಶಂಸುದ್ದೀನ್ ಬಂದರ್, ಪದ್ಮನಾಭ ಅಮೀನ, ನಿತ್ಯಾನಂದ ಶೆಟ್ಟಿ, ಜೀತೇಂದ್ರ ಸುವರ್ಣ, ಹೇಮಂತ್ ಗರೋಡಿ, ರಮಾನಂದ ಪೂಜಾರಿ, ಗೀತಾ ಅತ್ತಾವರ, ಫಾರೂಕ್ ಬಯಾಬೆ, ಜಾರ್ಜ್, ಶಶಿಕಲಾ ಪದ್ಮನಾಭ, ಶಕುಂತಲಾ ಕಾಮತ್, ಶಾಂತಲ ಗಟ್ಟಿ, ದುರ್ಗಾ ಪ್ರಸಾದ್, ಸಮರ್ಥ್ ಭಟ್, ನೆಲ್ಸನ್ ಮೊಂತೆರೋ, ಆಲ್ವಿನ್ ಪ್ರಕಾಶ್ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಪಹಲ್ಗಾಮ್ ಪ್ರವಾಸಿಗರ ಮೇಲೆ ದಾಳಿ ಖಂಡಿಸಿ ದ.ಕ. ಕಾಂಗ್ರೆಸ್ ವತಿಯಿಂದ ಮೊಂಬತ್ತಿ ಶ್ರದ್ದಾಂಜಲಿ Rating: 5 Reviewed By: karavali Times
Scroll to Top