ಪುತ್ತೂರು, ಎಪ್ರಿಲ್ 29, 2025 (ಕರಾವಳಿ ಟೈಮ್ಸ್) : ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಳ್ತಿಗೆ ಗ್ರಾಮದ ಹತ್ರ್ಯಡ್ಕ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ಮೃತ ಮಹಿಳೆಯನ್ನು ಕೊಳ್ತಿಗೆ ಗ್ರಾಮದ ಕನಿಯಾರು ಸಿ ಆರ್ ಸಿ ಕಾಲೊನಿ ನಿವಾಸಿ ಸೆಲ್ಲಮ್ಮ (65) ಎಂದು ಹೆಸರಿಸಲಾಗಿದೆ. ಇವರು ಕೆ ಎಫ್ ಡಿ ಸಿ ಯ ರಬ್ಬರ್ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗುತ್ತಿದ್ದು, ಮಂಗಳವಾರ ಬೆಳಿಗ್ಗೆ 7 ಗಂಟೆಯಿಂಧ 8 ಗಂಟೆಯ ಅವಧಿಯಲ್ಲಿ ಕೊಳ್ತಿಗೆ ಗ್ರಾಮದ ಹತ್ರ್ಯಡ್ಕ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ವೇಳೆ ಕಾಡಾನೆಯೊಂದು ದಾಳಿ ಮಾಡಿ ಸೆಲ್ಲಮ್ಮ ಅವರನ್ನು ಓಡಿಸಿಕೊಂಡು ಹೋಗಿದ್ದು ತುಳಿದು ಗಂಭೀರ ಗಾಯಗೊಳಿಸಿದೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮೃತರ ಪುತ್ರ ಟಿ ಯೋಗರಾಜ್ ಅವರು ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಕೆ ಎಫ್ ಡಿ ಸಿ ಅಧಿಕಾರಿಗಳು, ಸುಳ್ಯ ವೃತ್ತ £ರೀಕ್ಷಕರು ಹಾಗೂ ಬೆಳ್ಳಾರೆ ಠಾಣಾ ಪೆÇಲೀಸರು ಬೇಟಿ £ೀಡಿ ಪರಿಶೀಲಿಸಿರುತ್ತಾರೆ.
0 comments:
Post a Comment