ಹೆದ್ದಾರಿಯಲ್ಲಿ ಬೇಕಾಬಿಟ್ಟಿ ಸಂಚಾರ : ಎರಡು ಕಾರುಗಳ ಗುರುತು ಪತ್ತೆ ಹಚ್ಚಿದ ಕಡಬ ಪೊಲೀಸರು - Karavali Times ಹೆದ್ದಾರಿಯಲ್ಲಿ ಬೇಕಾಬಿಟ್ಟಿ ಸಂಚಾರ : ಎರಡು ಕಾರುಗಳ ಗುರುತು ಪತ್ತೆ ಹಚ್ಚಿದ ಕಡಬ ಪೊಲೀಸರು - Karavali Times

728x90

29 April 2025

ಹೆದ್ದಾರಿಯಲ್ಲಿ ಬೇಕಾಬಿಟ್ಟಿ ಸಂಚಾರ : ಎರಡು ಕಾರುಗಳ ಗುರುತು ಪತ್ತೆ ಹಚ್ಚಿದ ಕಡಬ ಪೊಲೀಸರು

ಕಡಬ, ಎಪ್ರಿಲ್ 29, 2025 (ಕರಾವಳಿ ಟೈಮ್ಸ್) : ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಭಾನುವಾರ ರಾತ್ರಿ ಪೆರಾಬೆ ಕಡೆಯಿಂದ ಆಲಂಕಾರು ಕಡೆಗೆ 3 ಕಾರುಗಳನ್ನು ಅದರ ಚಾಲಕರು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯಲ್ಲಿ ಅಪಾಯಕಾರಿಯಾಗಿ ಚಾಲನೆ ಮಾಡಿಕೊಂಡು ತೆರಳುತ್ತಿರುವುದು ಹಾಗೂ ಸದ್ರಿ ಕಾರುಗಳಲ್ಲಿದ್ದ ಸಹ ಪ್ರಯಾಣಿಕರು ಅಪಾಯಕಾರಿಯಾಗಿ ಕಿಟಕಿಯಿಂದ ಹೊರಬಂದು ಬೊಬ್ಬೆ ಹಾಕುತ್ತಿರುವ ವಿಡಿಯೋ ವೈರಲ್ ಆಗಿರುವ ಬಗ್ಗೆ ಕಾರ್ಯಪ್ರವೃತ್ತರಾದ ಕಡಬ ಪೊಲೀಸರು ಈ ಪೈಕಿ ಎರಡು ಕಾರುಗಳ ಗುರುತು ಪತ್ತೆ ಹಚ್ಚಿದ್ದಾರೆ. ಇನ್ನೊಂದು ಕಾರಿನ ಗುರುತು ಪತ್ತೆ ಹಚ್ಚಲು ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. 

ಭಾನುವಾರ ರಾತ್ರಿ ಕಡಬ ಪೆÇಲೀಸ್ ಠಾಣಾ ವ್ಯಾಪ್ತಿಯ ಕಡಬ ತಾಲೂಕು ಪೆರಾಬೆ ಗ್ರಾಮದ ಪರಿಸರದಲ್ಲಿನ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಪೆರಾಬೆ ಕಡೆಯಿಂದ ಆಲಂಕಾರು ಕಡೆಗೆ 3 ಕಾರುಗಳನ್ನು ಅದರ ಚಾಲಕರು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯಲ್ಲಿ ಅಪಾಯಕಾರಿಯಾಗಿ ಚಾಲನೆ ಮಾಡಿಕೊಂಡು ತೆರಳುತ್ತಿರುವುದು ಹಾಗೂ ಸದ್ರಿ ಕಾರುಗಳಲ್ಲಿದ್ದ ಸಹ ಪ್ರಯಾಣಿಕರು ಅಪಾಯಕಾರಿಯಾಗಿ ಕಿಟಕಿಯಿಂದ ಹೊರ ಬಂದು ಬೊಬ್ಬೆ ಹಾಕುತ್ತಿರುವ ವಿಡಿಯೋ ವೈರಲ್ ಆಗಿತ್ತು. 

ಈ ಬಗ್ಗೆ ಕಾರ್ಯಪ್ರವೃತ್ತರಾದ ಪೊಲೀಸರು ಪರಿಶೀಲನೆ ನಡೆಸಿ ಕೆಎ19 ಎಂಇ4400 ಹಾಗೂ ಕೆಎ34 ಎನ್5909 ನೋಂದಣಿ ಸಂಖ್ಯೆಯ ಎರಡು ಕಾರುಗಳ ಗುರುತು ಪತ್ತೆ ಹಚ್ಚಿದ್ದಾರೆ. ಇನ್ನೊಂದು ಕಾರಿನ ನೋಂದಣಿ ಸಂಖ್ಯೆ ಪತ್ತೆ ಹಚ್ಚಲು ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಈ ಬಗ್ಗೆ ಕಡಬ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಹೆದ್ದಾರಿಯಲ್ಲಿ ಬೇಕಾಬಿಟ್ಟಿ ಸಂಚಾರ : ಎರಡು ಕಾರುಗಳ ಗುರುತು ಪತ್ತೆ ಹಚ್ಚಿದ ಕಡಬ ಪೊಲೀಸರು Rating: 5 Reviewed By: karavali Times
Scroll to Top