ಉತ್ತಮ ಸಂಸ್ಕಾರ ಪಡೆದ ಮಕ್ಕಳು ದಾರಿ ತಪ್ಪುವುದಿಲ್ಲ : ಮಾಜಿ ಶಾಸಕ ರುಕ್ಮಯ ಪೂಜಾರಿ
ಅತ್ಯಾಧುನಿಕ ಹೈಟೆಕ್ ಮಾದರಿಯಲ್ಲಿ ನವೀಕರಣಗೊಂಡ ನರಿಕೊಂಬು ವೀರಮಾರುತಿ ಅಂಗನವಾಡಿ ಕೇಂದ್ರ ಉದ್ಘಾಟನೆ : ಸ್ಥಳೀಯ ಶಾಕರ ಗೈರಿಗೆ ಮಕ್ಕಳ ಪೋಷಕರು, ಸ್ಥಳೀಯರ ಅಸಮಾಧಾನ
ಬಂಟ್ವಾಳ, ಎಪ್ರಿಲ್ 24, 2025 (ಕರಾವಳಿ ಟೈಮ್ಸ್) : ಅಂಗನವಾಡಿ ಕೇಂದ್ರಗಳು ಸೇವಾ ಮನೋಭಾವ ಹೊಂದಿ ಆರೋಗ್ಯವಂತ ಮಕ್ಕಳವನ್ನು ಸಮಾಜಕ್ಕೆ ಕೊಡುವ ಕೇಂದ್ರವಾಗಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.
ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಕೋಡಿಮಜಲು ಅವರ ವಿಶೇಷ ಮುತುವರ್ಜಿಯಲ್ಲಿ ವಿವಿಧ ಇಲಾಖೆಗಳು ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಸುಮಾರು 19 ಲಕ್ಷ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ ಹೈಟೆಕ್ ಮಾದರಿಯಲ್ಲಿ ನವೀಕರಣಗೊಂಡ ನರಿಕೊಂಬು ಗ್ರಾಮದ ಮಾರುತಿ ನಗರದ ವೀರಮಾರುತಿ ಅಂಗನವಾಡಿ ಕೇಂದ್ರದ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಂಗನವಾಡಿ ಕಟ್ಟಡ ಉದ್ಘಾಟಿಸಿದ ವಿಟ್ಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರ ಎ ರುಕ್ಮಯ್ಯ ಪೂಜಾರಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ ಕಲಿಸಿ. ಮಕ್ಕಳು ಮನೆಯ ಹಿರಿಯರ ನಡತೆಯನ್ನು ಅನುಕರಣೆ ಮಾಡುವುದರಿಂದ ಪೆÇೀಷಕರು ಬಹಳ ಜಾಗೃತೆ ವಹಿಸಬೇಕಾಗಿದೆ, ಆಧುನಿಕ ಯಾಂತ್ರಿಕೃತ ಯುಗದಲ್ಲಿ ಉತ್ತಮ ಸಂಸ್ಕಾರ ಪಡೆದ ಮಕ್ಕಳು ಜೀವನದಲ್ಲಿ ದಾರಿ ತಪ್ಪುವುದಿಲ್ಲ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಬಂಟ್ವಾಳ ತಾಲೂಕು ಪಂಚಾಯತ್, ನರಿಕೊಂಬು ಗ್ರಾಮ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಬಂಟ್ವಾಳ ಮತ್ತು ಶಿಶು ಅಭಿವೃದ್ದಿ ಯೋಜನೆ ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನರೇಗಾ, ಗ್ರಾಮ ಪಂಚಾಯತ್ ಮತ್ತು ಮಂಗಳೂರು ಎಂ ಆರ್ ಪಿ ಎಲ್ ಇದರ ಸಿ ಎಸ್ ಆರ್ ಅನುದಾನದಲ್ಲಿ ಈ ಹೈಟೆಕ್ ಅಂಗನವಾಡಿ ಕಟ್ಟಡ ನಿರ್ಮಾಣಗೊಂಡು ಇದೀಗ ಲೋಕಾರ್ಪಣೆಗೊಂಡಿದೆ.
ಸ್ಥಳೀಯ ಪ್ರಗತಿಪರ ಕೃಷಿಕ ಪದ್ಮನಾಭ ಮಯ್ಯ ಏಲಬೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಮಾತನಾಡಿ, ಇಚ್ಚಾ ಶಕ್ತಿ ಇದ್ದರೆ ಒಬ್ಬ ಪಂಚಾಯತ್ ಸದಸ್ಯ ಯಾವ ರೀತಿ ತಮ್ಮ ವಾರ್ಡಿನಲ್ಲಿ ಕೆಲಸ ಮಾಡಬಹುದು ಎಂಬುದಕ್ಕೆ ಪಂಚಾಯತ್ ನರಿಕೊಂಬು ಗ್ರಾ ಪಂ ಸದಸ್ಯ ಪ್ರಕಾಶ್ ಕೋಡಿಮಜಲ್ ಅವರೇ ಸ್ಪಷ್ಟ ಉದಾಹರಣೆಯಾಗಿದ್ದಾರೆ. ನರಿಕೊಂಬು ಪಂಚಾಯತ್ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ಇಷ್ಟೊಂದು ಅನುದಾನವನ್ನು ಉದ್ಯೋಗ ಖಾತರಿ ಮೂಲಕ ಅಂಗನವಾಡಿ ಕೇಂದ್ರದ ಅಭಿವೃದ್ಧಿಗೆ ಬಳಸಲಾಗಿದೆ ಎಂದರು.
ಅಂಗನವಾಡಿ ಕೇಂದ್ರದ ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ಬಂಟ್ವಾಳ ಶಿಶು ಅಬಿವೃದ್ಧಿ ಯೋಜನಾಧಿಕಾರಿ ಮುಮ್ತಾಜ್ ಎಚ್ ಅವರು, ಬಂಟ್ವಾಳ ತಾಲೂಕಿನಲ್ಲಿ ಸುಮಾರು 470 ಅಂಗನವಾಡಿಗಳಿದ್ದು ವೀರ ಮಾರುತಿ ಅಂಗನವಾಡಿ ಕೇಂದ್ರ ಅವೆಲ್ಲ ಅಂಗನವಾಡಿಗಳಿಗೆ ಮಾದರಿಯಾಗಿದೆ, ಅಗನವಾಡಿಗಳು ಮಗುವಿನ ಜೀವನ ರೂಪಿಸುವ ಕೇಂದ್ರವಾಗಿದೆ. ಇಷ್ಟೊಂದು ಸುಂದರ ಅಂಗನವಾಡಿ ನಿರ್ಮಿಸಲು ಸಹಕರಿಸಿದ ಎಲ್ಲರಿಗೂ ಇಲಾಖೆ ಪರವಾಗಿ ಕೃತಜ್ಞತೆಗಳು ಎಂದರು.
ಇದೇ ವೇಳೆ ಸದಾಶಿವ ಕುಲಾಲ್ ಮಾರುತಿ ನಗರ, ನರಿಕೊಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಶೋಭಾ, ಗುತ್ತಿಗೆದಾರ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ನಿವೃತ್ತ ಅಂಗನವಾಡಿ ಶಿಕ್ಷಕಿ ಹಾಗೂ ಬಂಟ್ವಾಳ ತಾ ಪಂ ಮಾಜಿ ಅಧ್ಯಕ್ಷೆ ಸುನೀತಾ ಪದ್ಮನಾಭ ಹಾಗೂ ಕು ಪ್ರಮೀಳಾ ಮಾರುತಿನಗರ ಅವರನ್ನು ಗೌರವಿಸಲಾಯಿತು. ವಿಶೇಷ ಸಹಕಾರ ನೀಡಿದ ಮಹನೀಯರಿಗೆ ಸ್ಮರಣೆಕೆ ನೀಡಿ ಗೌರವಿಸಲಾಯಿತು.
ಅಂಗನವಾಡಿ ಮಕ್ಕಳಿಗೆ ಹಾಗೂ ಪೆÇೀಷಕರಿಗೆ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮಂಗಳೂರು ಲೋಟಸ್ ಗ್ರೂಪ್ ಪಾಲುದಾರ ಜಿತೇಂದ್ರ ಎಸ್ ಕೊಟ್ಟಾರಿ, ನರಿಕೊಂಬು ಚಾರಿಟೇಬಲ್ ಟ್ರಸ್ಟ್ ಬೊಂಡಾಲ ಇದರ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಬಂಟ್ವಾಳ ಶಿಶು ಅಭಿವೃದ್ಧಿ ಕೇಂದ್ರದ ಮೇಲ್ವಿಚಾರಕಿ ನೀತಾ, ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಆರ್ ಚೆನ್ನಪ್ಪ ಕೋಟ್ಯಾನ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯ ಉಮೇಶ್ ಬೋಳಂತೂರು, ಉದ್ಯಮಿ ಸಂದೇಶ ಮಾಣಿಮಜಲು, ಗೋಳ್ತಮಜಲು ಶಕ್ತಿ ಕೇಂದ್ರದ ಅಧ್ಯಕ್ಷ ಜಿನರಾಜ್ ಕೋಟ್ಯಾನ್ ಮೈರಡ್ಕ, ನರಿಕೊಂಬು ಶಕ್ತಿ ಕೇಂದ್ರದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಹೊಸಲಚ್ಚಿಲು, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಆನಂದ ಅಡ್ಡದಪಾದೆ, ವೀರಮಾರುತಿ ವ್ಯಾಯಾಮ ಶಾಲಾ ಟ್ರಸ್ಟ್ ಅಧ್ಯಕ್ಷ ಉಮೇಶ್ ಕೋಡಿಮಜಲು, ಪಂಚಾಯತ್ ಸದಸ್ಯರುಗಳಾದ ಶುಭ ಶಶಿಧರ್, ಪ್ರಕಾಶ್ ಕೋಡಿಮಜಲ್ ನಿವೃತ್ತ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ ಜೋಶಿ, ಹರಿಣಾಕ್ಷಿ ಮಾಣಿ ಮಜಲ್, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಐಶ್ವರ್ಯ ಮೊದಲಾದವರು ಅತಿಥಿಗಳಾಗಿದ್ದರು.
ಕಾರ್ಯಕ್ರಮದ ಪ್ರಯುಕ್ತ ಅಂಗನವಾಡಿ ಪುಟಾಣಿಗಳಿಂದ, ಅಂಗನವಾಡಿ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ, ಮಾರುತಿನಗರ ಲಾಸ್ಯ ನಾಟ್ಯ ನಿಕೇತನ ತಂಡದಿಂದ ಭರತ ನಾಟ್ಯ, ನರಿಕೊಂಬು ನಿಶಾನಿ ಡ್ಯಾನ್ಸ್ ಗ್ರೂಪ್ ಇವರಿಂದ ನೃತ್ಯ ಕಾರ್ಯಕ್ರಮ, ರವಿಚಂದ್ರ ಮಾಣಿಮಜಲು ಇವರ ನೇತೃತ್ವದ ತಂಡದಿಂದ ಸಂಗೀತ ರಸಮಂಜರಿ, ಸ್ತ್ರೀ ಶಕ್ತಿ ಹಾಗೂ ಮಕ್ಕಳ ಪೆÇೀಷಕರಿಂದ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು.
ಬಾಲವಿಕಾಸ ಸಮಿತಿಯ ಸದಸ್ಯ ಚಂದ್ರಹಾಸ್ ಕೋಡಿಮಜಲು ಸ್ವಾಗತಿಸಿ, ಅಂಗನವಾಡಿ ಶಿಕ್ಷಕಿ ಶೋಭಾ ವರದಿ ವಾಚಿಸಿದರು. ನಯನ ಯಾದವ್ ವಂದಿಸಿದರು. ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.
ಸ್ಥಳೀಯ ಶಾಸಕರ ಗೈರು ಹಾಜರಿಗೆ ಪೋಷಕರ ಸಹಿತ ಸ್ಥಳೀಯರ ಅಸಮಾಧಾನ
ವಿವಿಧ ರೀತಿಯಲ್ಲಿ ಹಣ ಸಂಗ್ರಹಿಸಿ ಪುಟಾಣಿಗಳ ಹಿತದೃಷ್ಟಿಯಿಂದ ಸ್ಥಳೀಯ ಗ್ರಾ ಪಂ ಸದಸ್ಯನ ವಿಶೇಷ ಮುತುವರ್ಜಿಯಲ್ಲಿ ಹೈಟೆಕ್ ಮಾದರಿಯಲ್ಲಿ ಇಲ್ಲಿನ ಅಂಗನವಾಡಿ ಕೇಂದ್ರವನ್ನು ನವೀಕರಿಸಿ ಉದ್ಘಾಟನಾ ಕಾರ್ಯಕ್ರಮವನ್ನು ಎಲ್ಲರನ್ನು ಒಗ್ಗೂಡಿಸಿ ವಿಜೃಂಭಣೆಯಿಂದ ನಾಡ ಹಬ್ಬದ ರೀತಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಅಂಗನವಾಡಿ ಪುಟಾಣಿಗಳ ಪೋಷಕರ ಸಹಿತ ಸ್ಥಳೀಯರೆಲ್ಲರೂ ಸಂಭ್ರಮದಿಂದ ಪಾಲ್ಗೊಂಡಿದ್ದರು. ಸಂಸದರು ಶಾಸಕರ ಸಹಿತ ಹಲವು ಮಂದಿ ಗಣ್ಯರಿಗೆ ಸ್ವತಃ ಪಂಚಾಯತ್ ಸದಸ್ಯರೇ ಖುದ್ದು ಕಚೇರಿಗಳಿಗೆ ಭೇಟಿ ನೀಡಿ ಮುದ್ರಿತ ಆಹ್ವಾನ ಪತ್ರಿಕೆಗಳನ್ನು ನೀಡಿ ಗೌರವದ ಆಹ್ವಾನ ನೀಡಿ ಬಂದಿದ್ದರೂ, ಜವಾಬ್ದಾರಿಯಿಂದ ಭಾಗವಹಿಸಬೇಕಾಗಿದ್ದ ಸ್ಥಳೀಯ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಹಾಗೂ ಸಂಸದ ಕ್ಯಾ ಬ್ರಿಜೇಶ್ ಚೌಟ ಅವರುಗಳು ಕಾರ್ಯಕ್ರಮಕ್ಕೆ ಗೈರು ಹಾಜರಾಗಿರುವುದು ಸ್ಥಳೀಯರ ತೀವ್ರ ಬೇಸರಕ್ಕೆ ಕಾರಣವಾಗಿದೆ. ಮಾಜಿ ಶಾಸಕರುಗಳಾದ ರುಕ್ಮಯ ಪೂಜಾರಿ, ರಮಾನಾಥ ರೈ ಸಹಿತ ವಿವಿಧ ಗಣ್ಯರು, ಇಲಾಖಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಅತ್ಯಂತ ವಿಜ್ರಂಭಣೆಯಿಂದ ಕಾರ್ಯಕ್ರಮ ಮುಕ್ತಾಯಗೊಂಡಿದ್ದರೂ ಸ್ಥಳೀಯ ಶಾಸಕರ ಗೈರು ಹಾಜರಿ ಬಗ್ಗೆ ಸ್ಥಳೀಯರು ಅಸಮಾಧಾನಗೊಂಡಿದ್ದಾರೆ. ಯಾವುದೇ ರಾಜಕೀಯ ಪ್ರೇರಿತ ಕಾರ್ಯಕ್ರಮವಾಗಿರದೆ ಅಂಗನವಾಡಿ ಪುಟಾಣಿಗಳ ಸಂಭ್ರಮಕ್ಕಾಗಿ ಅದ್ದೂರಿಯಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಶಾಸಕರು ಸಕಾರಣ ನೀಡದೆ ಗೈರು ಹಾಜರಾಗಿರುವುದು ನೋವು ತರಿಸಿದೆಯಲ್ಲದೆ ಶಾಸಕರ ವತಿಯಿಂದ ಅಂಗನವಾಡಿ ಕೇಂದ್ರದ ಆವರಣ ಗೋಡೆಗೆ ಈ ಮೊದಲು 2 ಲಕ್ಷ ರೂಪಾಯಿ ಅನುದಾನ ಮೀಸಲಿರಿಸಲಾಗಿದೆ ಎನ್ನಲಾಗುತ್ತಿದ್ದರೂ ಬಳಿಕ ಆ ಬಗ್ಗೆ ಯಾವುದೇ ಸುಳಿವು ಕೂಡಾ ಇಲ್ಲದೆ ಇರುವುದೂ ಬೇಸರ ತರಿಸಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
0 comments:
Post a Comment