ಬಂಟ್ವಾಳ, ಎಪ್ರಿಲ್ 30, 2025 (ಕರಾವಳಿ ಟೈಮ್ಸ್) : ಮಳೆ ನೀರು ಸೋರುತ್ತಿದ್ದ ಫ್ಯಾಕ್ಟರಿಯ ಶೀಟ್ ರಿಪೇರಿಗೆಂದು ಮೇಲೇರಿದ್ದ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದು ಒಡಿಸಾ ಮೂಲದ ಫ್ಯಾಕ್ಟರಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ತುಂಬೆ ಆಲ್ಟ್ರಾ ಪೆನಲ್ ಫ್ಯಾಕ್ಟರಿಯಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ಮೃತ ಕಾರ್ಮಿಕನನ್ನು ಒಡಿಸ್ಸಾ ರಾಜ್ಯದ ಕೇಂದ್ರಪರಾ ಜಿಲ್ಲೆಯ ಈಶ್ವರಪುರ ತಾಲೂಕಿನ ಬಡಹಲಪಡ-ಸನಕುವಾಲ್ ನಿವಾಸಿ ಬಾಬು ರಾಮ್ ದಾಸ್ ಎಂಬವರ ಪುತ್ರ ಪಂಡಾಬ್ ದಾಸ್ (31) ಎಂದು ಹೆಸರಿಸಲಾಗಿದೆ. ಈತ ತುಂಬೆ ಗ್ರಾಮದ ತುಂಬೆಯ ಆಲ್ಟ್ರಾ ಪೆನಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಸೋಮವಾರ ಸಂಜೆ ಸುಮಾರು 6 ಗಂಟೆಯ ವೇಳೆಗೆ ಫ್ಯಾಕ್ಟರಿ ಮೇಲೆ ಅಳವಡಿಸಿದ್ದ ಶೀಟಿನಿಂದ ಮಳೆ ನೀರು ಸೋರುತ್ತಿದ್ದ ಕಾರಣ ಅದನ್ನು ರಿಪೇರಿ ಮಾಡಲೆಂದು ಮೇಲೆ ಹತ್ತಿ ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ಕಾಲು ಜಾರಿ ನೆಲಕ್ಕೆ ಬಿದ್ದಿದ್ದಾನೆ. ಗಂಭೀರ ಗಾಯಗೊಂಡ ಆತನನ್ನು ತಕ್ಷಣ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಮೃತನ ಸಹೋದರ ಅರ್ಜುನ್ ದಾಸ್ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
0 comments:
Post a Comment