ಮಂಗಳೂರು, ಮೇ 01, 2025 (ಕರಾವಳಿ ಟೈಮ್ಸ್) : ಕಠಿಣ ಪರಿಶ್ರಮದಿಂದ ಹಾಗೂ ಸಮರ್ಪಣಾ ಭಾವದಿಂದ ದೇಶ ಕಟ್ಟುವ ಶ್ರಮ ಜೀವಿಗಳನ್ನು ಗೌರವಿಸುವ, ಅವರ ಸೇವೆಯನ್ನು ಸ್ಮರಿಸುವ, ಅವರ ಹಕ್ಕುಗಳನ್ನು ಭದ್ರಪಡಿಸುವ ಮೂಲಕ ಅವರಿಗೆ ಎಲ್ಲ ರೀತಿಯಲ್ಲೂ ಬೆಂಬಲಿಸುವುದು ಎಲ್ಲ ಜವಾಬ್ದಾರಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಘಟಕದ ಜಿಲ್ಲಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಹೇಳಿದರು.
ವಿಶ್ವ ಕಾರ್ಮಿಕ ದಿನಾಚರಣೆ ಹಿನ್ನಲೆಯಲ್ಲಿ ಸರ್ವ ಕಾರ್ಮಿಕ ವರ್ಗಕ್ಕೆ ಶುಭ ಸಂದೇಶ ನೀಡಿದ ಅವರು, ಜೀವನದ ಸವಾಲುಗಳನ್ನು ಮೆಟ್ಟಿ ನಿಂತು ತ್ಯಾಗದಿಂದಲೇ ತಮ್ಮ ಮಾಲಕರ ಬದುಕಿಗೆ ಖುಷಿ ನೀಡುವ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ದಿಗೆ ತೆರೆ ಮರೆಯಲ್ಲಿ ಅಪಾರ ಕೊಡುಗೆ ನೀಡುತ್ತಿರುವ ಎಲ್ಲ ಕಾರ್ಮಿಕ ಮತ್ತು ಅಸಂಘಟಿತ ಕಾರ್ಮಿಕರಿಗೆ ಸೂಕ್ತ ಗೌರವ, ಮನ್ನಣೆ ನೀಡುವ ಮೂಲಕ ಅವರಿಗೆ ಈ ದಿನದ ಶುಭಾಶಯಗಳು ಸಲ್ಲಬೇಕಾಗಿದೆ ಎಂದವರು ತಿಳಿಸಿದ್ದಾರೆ.
0 comments:
Post a Comment