ಮಂಗಳೂರು, ಎಪ್ರಿಲ್ 16, 2025 (ಕರಾವಳಿ ಟೈಮ್ಸ್) : ಕೇಂದ್ರ ಸರಕಾರ ಮಂಡಿಸಿರುವ ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಧಾರ್ಮಿಕ ವಿದ್ವಾಂಸರ ನೇತೃತ್ವದಲ್ಲಿ ಎಪ್ರ್ರಿಲ್ 18 ರಂದು ಅಡ್ಯಾರ್-ಕಣ್ಣೂರಿನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಘನ ವಾಹನ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ಬಗ್ಗೆ ಮಾಹಿತಿ ಇರುವ ಹಿನ್ನಲೆಯಲ್ಲಿ ಎಪ್ರಿಲ್ 18 ರ ಶುಕ್ರವಾರ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಡೀಲ್-ಕಣ್ಣೂರು-ಅಡ್ಯಾರ್-ಸಹ್ಯಾದ್ರಿ-ಅರ್ಕುಳ ಮಾರ್ಗಗಳಲ್ಲಿ ತೀವ್ರ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನಲೆ ಪರಿಸ್ಥಿತಿಯನ್ನು ಸರಾಗಗೊಳಿಸುವ ಸಲುವಾಗಿ, ಲಾರಿಗಳು, ಟ್ಯಾಂಕರ್‍ಗಳು ಮತ್ತು ಸರಕು ಸಾಗಣೆ ವಾಹನಗಳನ್ನು ಬೇರೆ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ.
ಮೆಲ್ಕಾರು ಜಂಕ್ಷನ್-ಪುತ್ತೂರು/ ಬಂಟ್ವಾಳ/ ಬೆಳ್ತಂಗಡಿ ಕಡೆಯಿಂದ ಮಂಗಳೂರು ನಗರ/ ಕಾಸರಗೋಡು ಕಡೆಗೆ ಬರುವ ವಾಹನಗಳು ಮೆಲ್ಕಾರ್ ಜಂಕ್ಷನ್-ಬೊಳಿಯಾರ್-ಮುಡಿಪು-ದೇರಳಕಟ್ಟೆ-ತೊಕ್ಕೊಟ್ಟು ಮಾರ್ಗವಾಗಿ ಸಂಚರಿಸುವುದು.
ಬಿ.ಸಿ.ರೋಡು-ಪೆÇಳಲಿ ದ್ವಾರ-ಬಿ.ಸಿ.ರೋಡ್ ಕಡೆಯಿಂದ ಮಂಗಳೂರು/ ಉಡುಪಿ ಕಡೆಗೆ ಸಂಚರಿಸುವ ವಾಹನಗಳು ಪೆÇಳಲಿ ದ್ವಾರದ ಮೂಲಕ ಕಲ್ಪನೆ ಜಂಕ್ಷನ್-ನೀರುಮಾರ್ಗ-ಬೈತುರ್ಲಿ-ಕುಲಶೇಖರ-ನಂತೂರು ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.
ವಳಚ್ಚಿಲ್ ಜಂಕ್ಷನ್-ಬಿ.ಸಿ.ರೋಡ್/ ತುಂಬೆ/ ಫರಂಗಿಪೇಟೆ ಕಡೆಯಿಂದ ಮಂಗಳೂರು ನಗರದ ಕಡೆಗೆ ಸಂಚರಿಸುವ ಲಘು ವಾಹನಗಳು (ಕಾರು/ ರಿಕ್ಷಾ /ಬೈಕ್) ವಳಚ್ಚಿಲ್‍ನಲ್ಲಿ ಬಲಕ್ಕೆ ತಿರುಗಿ ಮೇರ್ಲಪದವು-ನೀರುಮಾರ್ಗ-ಬೈತುರ್ಲಿ-ನಂತೂರು ಮೂಲಕ ಸಂಚರಿಸಲು ಸೂಚಿಸಲಾಗಿದೆ.
ಅಡ್ಯಾರ್ ಕಟ್ಟೆ-ಬಿ.ಸಿ.ರೋಡ್/ ತುಂಬೆ/ ಫರಂಗಿಪೇಟೆ ಕಡೆಯಿಂದ ಮಂಗಳೂರು ನಗರದ ಕಡೆಗೆ ಸಂಚರಿಸುವ ಲಘು ವಾಹನಗಳು (ಕಾರು/ ರಿಕ್ಷಾ /ಬೈಕ್) ಅಡ್ಯಾರ್ ಕಟ್ಟೆ ಬಳಿ ಎಡಕ್ಕೆ ತಿರುಗಿ ಹರೇಕಳ ಬ್ರಿಡ್ಜ್-ಕೊಣಾಜೆ-ದೇರಳಕಟ್ಟೆ-ತೊಕ್ಕೊಟ್ಟು ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.
ಪಂಪ್‍ವೆಲ್ ಜಂಕ್ಷನ್-ಮಂಗಳೂರು ನಗರದ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ತೊಕ್ಕೊಟ್ಟು-ದೇರಳಕಟ್ಟೆ-ಮುಡಿಪು-ಬೊಳಿಯಾರ್-ಮೆಲ್ಕಾರ್ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.
ನಂತೂರು ವೃತ್ತ-ಮಂಗಳೂರು ನಗರ/ ಸುರತ್ಕಲ್ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಬಿಕರ್ನಕಟ್ಟೆ-ಕುಲಶೇಖರ-ಬೈತುರ್ಲಿ ಜಂಕ್ಷನ್-ನೀರುಮಾರ್ಗ-ಕಲ್ಪನೆ ಜಂಕ್ಷನ್-ಬಿ.ಸಿ.ರೋಡ್ ಕೈಕಂಬದ ಪೆÇಳಲಿ ದ್ವಾರದ ಮೂಲಕ ಸಂಚರಿಸಲು ಸೂಚಿಸಲಾಗಿದೆ.
ಕೆ.ಪಿ.ಟಿ. ವೃತ್ತ-ಮಂಗಳೂರು ನಗರ/ ಸುರತ್ಕಲ್ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಪದವಿನಂಗಡಿ-ಪಚ್ಚನಾಡಿ-ವಾಮಂಜೂರು-ಬೈತುರ್ಲಿ ಜಂಕ್ಷನ್-ನೀರುಮಾರ್ಗ-ಕಲ್ಪನೆ ಮೂಲಕ ಅಥವಾ ಬೋಂದೆಲ್-ಕಾವೂರು-ಬಜಪೆ-ಕೈಕಂಬ-ಮೂಡಬಿದ್ರೆ ಮೂಲಕ ಸಂಚರಿಸುವುದು.
ಮುಲ್ಕಿ ವಿಜಯಸನ್ನಿಧಿ-ಉಡುಪಿ/ ಮುಲ್ಕಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಕಿನ್ನಿಗೋಳಿ-ಮೂಡಬಿದ್ರೆ-ಸಿದ್ದಕಟ್ಟೆ-ಬಂಟ್ವಾಳ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.
ಪಡುಬಿದ್ರೆ-ಉಡುಪಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಕಾರ್ಕಳ-ಮೂಡಬಿದ್ರೆ-ಸಿದ್ದಕಟ್ಟೆ-ಬಂಟ್ವಾಳ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.
0 comments:
Post a Comment