ಮಗನ ಮದುವೆಗೆಂದು ಖರೀದಿಸಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೇವಸ್ಥಾನಕ್ಕೆ ಹೋಗಿ ಬರುವಷ್ಟರಲ್ಲಿ ತಾಯಿ ಬ್ಯಾಗಿನಿಂದ ಕಳವು - Karavali Times ಮಗನ ಮದುವೆಗೆಂದು ಖರೀದಿಸಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೇವಸ್ಥಾನಕ್ಕೆ ಹೋಗಿ ಬರುವಷ್ಟರಲ್ಲಿ ತಾಯಿ ಬ್ಯಾಗಿನಿಂದ ಕಳವು - Karavali Times

728x90

12 May 2025

ಮಗನ ಮದುವೆಗೆಂದು ಖರೀದಿಸಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೇವಸ್ಥಾನಕ್ಕೆ ಹೋಗಿ ಬರುವಷ್ಟರಲ್ಲಿ ತಾಯಿ ಬ್ಯಾಗಿನಿಂದ ಕಳವು

ಬಂಟ್ವಾಳ, ಮೇ 12, 2025 (ಕರಾವಳಿ ಟೈಮ್ಸ್) : ಮಗನ ಮದುವೆಗೆಂದು ಖರೀದಿಸಿ ಬ್ಯಾಗಿನಲ್ಲಿಟ್ಟಿದ್ದ ಚಿನ್ನಾಭರಣ ದೇವಸ್ಥಾನಕ್ಕೆ ಹೋಗಿ ಬರುವಷ್ಟರಲ್ಲಿ ಕಳವಾಗಿರುವ ಘಟನೆ ಪೊಳಲಿ ದೇವಸ್ಥಾನ ವಠಾರದಲ್ಲಿ ಶನಿವಾರ ಸಂಭವಿಸಿದೆ. 

ಅಮ್ಟಾಡಿ ಗ್ರಾಮದ ಕಾಯರ್ ಮಾರ್ ನಿವಾಸಿ ಶ್ರೀಮತಿ ಗೀತಾ (63) ಅವರು ಮೇ 18 ರಂದು ಮಗನ ಮದುವೆ ಇರುವ ಪ್ರಯುಕ್ತ ಶನಿವಾರ 3,99,500/- ರೂಪಾಯಿ ಮೌಲ್ಯದ 41.800 ಗ್ರಾಂ ತೂಕದ ಪದಕ ಇರುವ ಕರಿಮಣಿ ಸರ ಹಾಗೂ 1 ಲಕ್ಷ ರೂಪಾಯಿ ಮೌಲ್ಯದ 9.820 ಗ್ರಾಂ ತೂಕದ ಚಿನ್ನದ ಬಳೆ ಖರೀದಿಸಿ ಸಂಪ್ರದಾಯದಂತೆ ದೇವರಲ್ಲಿ ಚಿನ್ನ ಇಟ್ಟು ಪೂಜಿಸುವರೇ ತನ್ನ ಮಗನೊಂದಿಗೆ ಬೆಳ್ಳಿಗ್ಗೆ 11.45 ಗಂಟೆಗೆ ಪೆÇಳಲಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ, ತನ್ನ ಬ್ಯಾಗ್ ನಲ್ಲಿರಿಸಿರುತ್ತಾರೆ. ಆ ಬಳಿಕ ದೇವರ ಪೂಜೆಯಲ್ಲಿ ಪಾಲ್ಗೊಂಡು ಬ್ಯಾಗನ್ನು ಗಮನಿಸಿದಾಗ ಬ್ಯಾಗಿಗೆ ಹಾಕಿದ್ದ ಜಿಪ್ ಸ್ವಲ್ಪ ತೆಗೆದಿರುವುದು ಗಮನಕ್ಕೆ ಬಂದಿದೆ. ಇದರಿಂದ ಬ್ಯಾಗ್ ಪರಿಶೀಲಿಸಿದಾಗ ಬ್ಯಾಗಿನಲ್ಲಿದ್ದ ಚಿನ್ನಾಭರಣ ಕಾಣೆಯಾಗಿರುತ್ತದೆ. 

ಈ ಬಗ್ಗೆ ಪರಿಸರದಲ್ಲಿ ಹುಡುಕಾಡಿದ್ದು, ಚಿನ್ನಾಭರಣ ಪತ್ತೆಯಾಗದೇ ಇದ್ದಾಗ, ನಂತರ ವಿಚಾರವನ್ನು ದೇವಸ್ಥಾನದ ಕಛೇರಿಯಲ್ಲಿ ತಿಳಿಸಿದ್ದು, ದೇವಸ್ಥಾನದವರೂ ಕೂಡಾ ಇತರ ಭಕ್ತಾದಿಗಳ ಬಳಿ ವಿಚಾರಿಸಿ ಪತ್ತೆಗೆ ಪ್ರಯತ್ನಿಸಿದರಾದರೂ ಚಿನ್ನಾಭರಣ ಪತ್ತೆಯಾಗಿರುವುದಿಲ್ಲ. ಕಳವಾಗಿರುವ ಚಿನ್ನಾಭರಣಗಳ ಒಟ್ಟು ಮೌಲ್ಯ 4,99,500/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಗನ ಮದುವೆಗೆಂದು ಖರೀದಿಸಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೇವಸ್ಥಾನಕ್ಕೆ ಹೋಗಿ ಬರುವಷ್ಟರಲ್ಲಿ ತಾಯಿ ಬ್ಯಾಗಿನಿಂದ ಕಳವು Rating: 5 Reviewed By: karavali Times
Scroll to Top