ಮಂಗಳೂರು, ಮೇ 13, 2025 (ಕರಾವಳಿ ಟೈಮ್ಸ್) : ನಗರದ ಅಪ್ಪರ್ ಬೆಂದೂರ್ ಇಲ್ಲಿನ ಎಸ್ ಸಿ ಎಸ್ ಆಸ್ಪತ್ರೆಯಲ್ಲಿ ಅಂತರಾಷ್ಟ್ರೀಯ ದಾದಿಯರ ದಿನಾಚರಣೆ (ನರ್ಸಿಂಗ್ ಡೇ) ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿಟ್ಟೆ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಇಲ್ಲಿನ ವೈದ್ಯಕೀಯ ಸಂಯೋಜಕಿ ಡಾ ಜೆಸಿಂತಾ ವೇಗಸ್ ಮಾತನಾಡಿ, ಸಮಾಜವನ್ನು ಸಬಲೀಕರಣದತ್ತ ಕೊಂಡೊಯ್ಯುವಲ್ಲಿ ದಾದಿಯರ ಪಾತ್ರ ಅಪಾರವಾದುದು ಹಾಗೂ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ದಾದಿಯರು ಬೆನ್ನೆಲುಬು ಇದ್ದಂತೆ ಎಂದರಲ್ಲದೆ ದಾದಿಯರು ಸದಾ ನಗುಮೊಗದ ಸೇವೆಯೊಂದಿಗೆ ಸಕಾರಾತ್ಮಕ ಮನೋಭಾವ ಹೊಂದಿರಬೇಕು, ಸದಾ ಕೌಶಲ್ಯ ತರಬೇತಿಯನ್ನು ಪಡೆಯುತ್ತಾ ತಮ್ಮ ವ್ಯಕ್ತಿತ್ವ ವಿಕಸನಗೊಳಿಸುವುದರ ಮೂಲಕ ರೋಗಿಗಳಿಗೆ ಉತ್ತಮ ಸೇವೆಯನ್ನು
ಸಲ್ಲಿಸುವಂತಾಗಬೇಕು ಎಂದು ಸಲಹೆ ನೀಡಿದರು.
ಎಸ್ ಸಿ ಎಸ್ ಅಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ ಜೀವರಾಜ್ ಸೊರಕೆ, ವೈದ್ಯಕೀಯ ನಿರೀಕ್ಷಕ ಡಾ ಚಂದ್ರಶೇಖರ್ ಜೆ ಸೊರಕೆ, ಮೆಡಿಕಲ್ ಸುಪರಿಂಟೆಂಡೆಂಟ್ ಡಾ ಶಾಲಿನಿ ಹಾಗೂ ನರ್ಸಿಂಗ್ ಸುಪರಿಂಟೆಂಡೆಂಟ್ ಗ್ರೆಸಮ್ಮ ಆಂಟನಿ ಅವರು ಭಾಗವಹಿಸಿದ್ದರು.
ಬಳಿಕ ಆಸ್ಪತ್ರೆಯ ದಾದಿಯರು ಹಾಗೂ ಸಿಬ್ಬಂದಿಗಳಿಗಾಗಿ ಸಾಂಸ್ಕøತಿಕ ಕಾರ್ಯಕ್ರಮದ ಆಂಗವಾಗಿ ನೃತ್ಯ, ರಸಪ್ರಶ್ನೆ ಸ್ಪರ್ಧೆ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
0 comments:
Post a Comment