ಸಿಇಟಿ-2025 ಪರೀಕ್ಷಾ ಫಲಿತಾಂಶ ಪ್ರಕಟಿಸಿದ ಸಚಿವ ಡಾ ಎಂ.ಸಿ. ಸುಧಾಕರ್ : ಎಂಜಿನಿಯರಿಂಗ್ ವಿಭಾಗದಲ್ಲಿ ಭವೇಶ್ ಜಯಂತಿ, ಕೃಷಿಯಲ್ಲಿ ಅಕ್ಷಯ್ ಎಂ ಹೆಗೆಡೆ, ನರ್ಸಿಂಗ್ ವಿಭಾಗದಲ್ಲಿ ಹರೀಶ್ ರಾಜ್ ಅವರಿಗೆ ಪ್ರಥಮ ರ್ಯಾಂಕ್ - Karavali Times ಸಿಇಟಿ-2025 ಪರೀಕ್ಷಾ ಫಲಿತಾಂಶ ಪ್ರಕಟಿಸಿದ ಸಚಿವ ಡಾ ಎಂ.ಸಿ. ಸುಧಾಕರ್ : ಎಂಜಿನಿಯರಿಂಗ್ ವಿಭಾಗದಲ್ಲಿ ಭವೇಶ್ ಜಯಂತಿ, ಕೃಷಿಯಲ್ಲಿ ಅಕ್ಷಯ್ ಎಂ ಹೆಗೆಡೆ, ನರ್ಸಿಂಗ್ ವಿಭಾಗದಲ್ಲಿ ಹರೀಶ್ ರಾಜ್ ಅವರಿಗೆ ಪ್ರಥಮ ರ್ಯಾಂಕ್ - Karavali Times

728x90

24 May 2025

ಸಿಇಟಿ-2025 ಪರೀಕ್ಷಾ ಫಲಿತಾಂಶ ಪ್ರಕಟಿಸಿದ ಸಚಿವ ಡಾ ಎಂ.ಸಿ. ಸುಧಾಕರ್ : ಎಂಜಿನಿಯರಿಂಗ್ ವಿಭಾಗದಲ್ಲಿ ಭವೇಶ್ ಜಯಂತಿ, ಕೃಷಿಯಲ್ಲಿ ಅಕ್ಷಯ್ ಎಂ ಹೆಗೆಡೆ, ನರ್ಸಿಂಗ್ ವಿಭಾಗದಲ್ಲಿ ಹರೀಶ್ ರಾಜ್ ಅವರಿಗೆ ಪ್ರಥಮ ರ್ಯಾಂಕ್

 ಬೆಂಗಳೂರು, ಮೇ 24, 2025 (ಕರಾವಳಿ ಟೈಮ್ಸ್) : ಎಂಜಿನಿಯರಿಂಗ್ ಕೋರ್ಸು ಸಹಿತ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಎಪ್ರಿಲ್ 15 ರಿಂದ 17ರವರೆಗೆ ನಡೆಸಲಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಶನಿವಾರ ಬೆಳಿಗ್ಗೆ ಪ್ರಕಟಿಸಲಾಗಿದೆ. 

ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಅವರು ಬೆಂಗಳೂರಿನ ಕೆಇಎ ಕಚೇರಿಯಲ್ಲಿ ಶನಿವಾರ ಬೆಳಿಗ್ಗೆ 11.30ಕ್ಕೆ ಫಲಿತಾಂಶ ಪ್ರಕಟಿಸಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಕೆಇಎ ಅಧಿಕೃತ ವೆಬ್‍ಸೈಟ್ ಗಳಾದ cetonline.karnataka.gov.in ಮತ್ತು karresults.nic.in ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಫಲಿತಾಂಶದ ಲಿಂಕ್ ನ್ನು ಮಧ್ಯಾಹ್ನ 2 ಗಂಟೆಗೆ ಸಕ್ರಿಯಗೊಳಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಸಿಇಟಿ ಪರೀಕ್ಷೆಗೆ 3.30 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದರು. ಆ ಪೈಕಿ 3,11,000 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು.

ಸಿಇಟಿ ಎಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಮಾರತಹಳ್ಳಿ ಚೈತ್ಯನ್ಯ ಸಿಬಿಎಸ್‍ಇ ಶಾಲೆಯ ಭವೇಶ್ ಜಯಂತಿ ಮೊದಲ ರ್ಯಾಂಕ್ ಗಳಿಸಿದ್ದಾರೆ. ಚೈತನ್ಯ ಟೆಕ್ನೋ ಸ್ಕೂಲ್, ಕನಕಪುರ ರಸ್ತೆ ಉತ್ತರಹಳ್ಳಿ ವಿದ್ಯಾರ್ಥಿ ಸಾತ್ವಿಕ್ ಬಿರಾದರ್ ದ್ವಿತೀಯ ರ್ಯಾಂಕ್ ಗಳಿಸಿದ್ದಾರೆ. ದಿನೇಶ್ ಗೋಮತಿ ಶಂಕರ್ ಅರುಣಾಚಲಂ 3ನೇ ರ್ಯಾಂಕ್ ಗಳಿಸಿದ್ದಾರೆ.

ಅಗ್ರಿಕಲ್ಚರ್ ವಿಭಾಗದಲ್ಲಿ ಅಕ್ಷಯ್ ಎಂ ಪ್ರಥಮ ಸ್ಥಾನ, ಸಾಯಿಶ್ ಶರವಣ ಪಂಡಿತ್ ದ್ವಿತೀಯ ಸ್ಥಾನ ಹಾಗೂ ಸುಚಿತ್ ಪಿ. ಪ್ರಸಾದ್ ಮೂರನೇ ಸ್ಥಾನ ಗಳಿಸಿದ್ದಾರೆ.

ಬಿಎನ್‍ವೈಎಸ್, ಪಶುವೈದ್ಯಕೀಯ ಮತ್ತು ನರ್ಸಿಂಗ್ ವಿಭಾಗಗಳಲ್ಲಿ ಹರಿಶ್‍ರಾಜ್ ಡಿವಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. 


ಇಂಜಿನಿಯರಿಂಗ್ ವಿಭಾಗ 

1. ಭವೇಶ್ ಜಯಂತಿ-ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ

2. ಸಾತ್ವಿಕ್ ಬಿರಾದರ್-ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಉತ್ತರಹಳ್ಳಿ

3. ದಿನೇಶ್ ಅರುಣಾಚಲಂ-ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ


ಕೃಷಿ ವಿಭಾಗ 

1. ಅಕ್ಷಯ್ ಹೆಗ್ಡೆ - ಆಳ್ವಾಸ್ ಕಾಲೇಜ್ ಮುಡುಬಿದ್ರೆ

2. ಶಶಿ ಪಂಡಿತ್- ಎಕ್ಸ್‍ಪರ್ಟ್ ಪಿಯು ಕಾಲೇಜ್ ಮಂಗಳೂರು

3. ಸುಚಿತ್ ಪಿ. ಪ್ರಸಾದ್- ಎಕ್ಸ್‍ಪರ್ಟ್ ಪಿಯು ಕಾಲೇಜ್ ಮಂಗಳೂರು


ಪಶುಸಂಗೋಪನೆ ವಿಭಾಗ 

1. ಹರೀಶ್ ರಾಜ್ ಡಿ.ವಿ - ನಾರಾಯಣ ಇ ಟೆಕ್ನೋ ಯಲಹಂಕ

2. ಆತ್ರೇಯ - ಎನ್ ಪಿ ಎಸ್. ಎಚ್.ಎಸ್.ಆರ್. ಲೇಔಟ್

3. ಸಫಲ್ ಎಸ್ ಶೆಟ್ಟಿ - ಎಕ್ಸ್‍ಪರ್ಟ್ ಪಿಯು ಕಾಲೇಜ್ ಮಂಗಳೂರು


ಫಾರ್ಮ-ಡಿ ವಿಭಾಗ

1. ಆತ್ರೇಯ - ನ್ಯಾಷನಲ್ ಪಬ್ಲಿಕ್ ಸ್ಕೂಲ್ ಎಚ್.ಎಸ್.ಆರ್. ಲೇಔಟ್

2. ಭವೇಶ್ ಜಯಂತಿ-ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ

3. ಹರೀಶ್ ರಾಜ್ ಡಿ.ವಿ - ನಾರಾಯಣ ಇ ಟೆಕ್ನೋ ಯಲಹಂಕ


ನರ್ಸಿಂಗ್ ವಿಭಾಗ 

1. ಹರೀಶ್ ರಾಜ್ ಡಿ.ವಿ - ನಾರಾಯಣ ಇ ಟೆಕ್ನೋ ಯಲಹಂಕ

2. ಆತ್ರೇಯ - ನ್ಯಾಷನಲ್ ಪಬ್ಲಿಕ್ ಸ್ಕೂಲ್ ಎಚ್.ಎಸ್.ಆರ್. ಲೇಔಟ್

3. ಸಫಲ್ ಎಸ್. ಶೆಟ್ಟಿ - ಎಕ್ಸ್‍ಪರ್ಟ್ ಪಿಯು ಕಾಲೇಜ್ ಮಂಗಳೂರು


ಬಿ-ಫಾರ್ಮ್ ವಿಭಾಗ

1. ಆತ್ರೇಯ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಎಚ್.ಎಸ್.ಆರ್. ಲೇಔಟ್

2. ಭವೇಶ್ ಜಯಂತಿ - ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ

3. ಹರೀಶ್ ರಾಜ್ ಡಿ.ವಿ - ನಾರಾಯಣ ಇ ಟೆಕ್ನೋ ಯಲಹಂಕ


  • Blogger Comments
  • Facebook Comments

0 comments:

Post a Comment

Item Reviewed: ಸಿಇಟಿ-2025 ಪರೀಕ್ಷಾ ಫಲಿತಾಂಶ ಪ್ರಕಟಿಸಿದ ಸಚಿವ ಡಾ ಎಂ.ಸಿ. ಸುಧಾಕರ್ : ಎಂಜಿನಿಯರಿಂಗ್ ವಿಭಾಗದಲ್ಲಿ ಭವೇಶ್ ಜಯಂತಿ, ಕೃಷಿಯಲ್ಲಿ ಅಕ್ಷಯ್ ಎಂ ಹೆಗೆಡೆ, ನರ್ಸಿಂಗ್ ವಿಭಾಗದಲ್ಲಿ ಹರೀಶ್ ರಾಜ್ ಅವರಿಗೆ ಪ್ರಥಮ ರ್ಯಾಂಕ್ Rating: 5 Reviewed By: karavali Times
Scroll to Top