ಬಂಟ್ವಾಳ, ಜೂನ್ 09, 2025 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ 2025-2026ನೇ ಸಾಲಿನ ನೂತನ ಅಧ್ಯಕ್ಷರಾಗಿ ಬಿ ರಮೇಶ್ ಸಾಲ್ಯಾನ್ ಸಂಚಯಗಿರಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಯಾದವ ಕುಲಾಲ್ ಅಗ್ರಬೈಲು ಅವರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಂಘದ ಮಹಾಸಭೆಯಲ್ಲಿ ಈ ಅಯ್ಕೆ ಪ್ರಕ್ರಿಯೆ ನಡೆದಿದ್ದು, ಉಪಾಧ್ಯಕ್ಷೆಯಾಗಿ ಜಲಜಾಕ್ಷಿ ಕುಲಾಲ್ ಪಾಣೆಮಂಗಳೂರು, ಕೋಶಾಧಿಕಾರಿಯಾಗಿ ಸೋಮನಾಥ ಸಾಲ್ಯಾನ್ ರಾಮನಗರ, ಜೊತೆ ಕಾರ್ಯದರ್ಶಿಗಳಾಗಿ ಮೀನಾಕ್ಷಿ ಪದ್ಮನಾಭ ಅಲೆತ್ತೂರು ಹಾಗೂ ಸತೀಶ್ ಸಂಪಾಜೆ, ಸಂಘಟನಾ ಕಾರ್ಯದರ್ಶಿಯಾಗಿ ಸುರೇಶ್ ಕುಲಾಲ್ ಬಂಟ್ವಾಳ, ಸೇವಾ ದಳಪತಿಯಾಗಿ ಜಯಂತ್ ಕುಲಾಲ್ ಅಗ್ರಬೈಲ್, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಆಶಾ ಗಿರಿಧರ್ ಪಾಪಿನಕೋಡಿ ಅವರು ಆಯ್ಕೆಯಾಗಿದ್ದಾರೆ ಸಂಘದ ಪ್ರಕಟಣೆ ತಿಳಿಸಿದೆ.
0 comments:
Post a Comment