ಕೂರತ್ ಉರೂಸ್ ಕಾರ್ಯಕ್ರಮದ ಜನದಟ್ಟಣೆಯಲ್ಲಿ ಅಸ್ವಸ್ಥಗೊಂಡ 6 ಮಂದಿಗೆ ಚಿಕಿತ್ಸೆ : ಸುಳ್ಳು ವದಂತಿ ಹರಡದಂತೆ ಎಸ್ಪಿ ಸೂಚನೆ - Karavali Times ಕೂರತ್ ಉರೂಸ್ ಕಾರ್ಯಕ್ರಮದ ಜನದಟ್ಟಣೆಯಲ್ಲಿ ಅಸ್ವಸ್ಥಗೊಂಡ 6 ಮಂದಿಗೆ ಚಿಕಿತ್ಸೆ : ಸುಳ್ಳು ವದಂತಿ ಹರಡದಂತೆ ಎಸ್ಪಿ ಸೂಚನೆ - Karavali Times

728x90

29 June 2025

ಕೂರತ್ ಉರೂಸ್ ಕಾರ್ಯಕ್ರಮದ ಜನದಟ್ಟಣೆಯಲ್ಲಿ ಅಸ್ವಸ್ಥಗೊಂಡ 6 ಮಂದಿಗೆ ಚಿಕಿತ್ಸೆ : ಸುಳ್ಳು ವದಂತಿ ಹರಡದಂತೆ ಎಸ್ಪಿ ಸೂಚನೆ

 ಪುತ್ತೂರು, ಜೂನ್ 29, 2025 (ಕರಾವಳಿ ಟೈಮ್ಸ್) : ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕುದ್ಮಾರ್ ಗ್ರಾಮದ ಕೂರತ್ ಮಸೀದಿಯಲ್ಲಿ ಭಾನುವಾರ ನಡೆದ ಉರೂಸ್ ಸಮಾರೋಪ ಕಾರ್ಯಕ್ರಮದಲ್ಲಿ ಜನದಟ್ಟಣೆಯಿಂದ ಆರು ಮಂದಿ ಅಸ್ವಸ್ಥಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ. ಅವರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಈ ಬಗ್ಗೆ ಯಾವುದೇ ಸುಳ್ಳು ವದಂತಿ ನಂಬಬೇಡಿ ಹಾಗೂ ಹರಡಬೇಡಿ ಎಂದು ಸಾರ್ವಜನಿಕರಿಗೆ ಜಿಲ್ಲಾ ಎಸ್ಪಿ ಮನವಿ ಮಾಡಿದ್ದಾರೆ.

 ಕೂರತ್ ಮಸೀದಿಯಲ್ಲಿ ನಡೆಸ ಉರೂಸ್ ಕಾರ್ಯಕ್ರಮಕ್ಕೆ ಬೇರೆ ಬೇರೆ ಸ್ಥಳಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿರುತ್ತಾರೆ. ಜನದಟ್ಟಣೆಯಲ್ಲಿ 6 ಮಂದಿ ದೈಹಿಕವಾಗಿ ನಿತ್ರಾಣಗೊಂಡಿದ್ದು, ಅವರುಗಳನ್ನು ಸ್ಥಳದಲ್ಲಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಚರಿಸಲಾಗಿ  ಇಬ್ಬರ ಆರೋಗ್ಯ ಸ್ಥಳದಲ್ಲೇ ಸುಧಾರಿಸಿದೆ. ಉಳಿದ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಅವರು ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ತೆರಳಿರುತ್ತಾರೆ. ಉರೂಸ್ ಕಾರ್ಯಕ್ರಮ ಮುಕ್ತಾಯಗೊಂಡಿರುತ್ತದೆ.

 ಈ ಬಗ್ಗೆ ಸಾರ್ವಜನಿಕರು ಯಾವುದೇ ಸುಳ್ಳು ವದಂತಿಗಳು ಹರಡದಂತೆ ಹಾಗೂ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದಾಗಿ ಎಸ್ಪಿ ಮನವಿ ಮಾಡಿಕೊಂಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಕೂರತ್ ಉರೂಸ್ ಕಾರ್ಯಕ್ರಮದ ಜನದಟ್ಟಣೆಯಲ್ಲಿ ಅಸ್ವಸ್ಥಗೊಂಡ 6 ಮಂದಿಗೆ ಚಿಕಿತ್ಸೆ : ಸುಳ್ಳು ವದಂತಿ ಹರಡದಂತೆ ಎಸ್ಪಿ ಸೂಚನೆ Rating: 5 Reviewed By: lk
Scroll to Top