ಮಂಗಲಪದವು : ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ವತಿಯಿಂದ ವನ ಮಹೋತ್ಸವ ಮತ್ತು ಸಸಿ ವಿತರಣೆ - Karavali Times ಮಂಗಲಪದವು : ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ವತಿಯಿಂದ ವನ ಮಹೋತ್ಸವ ಮತ್ತು ಸಸಿ ವಿತರಣೆ - Karavali Times

728x90

30 June 2025

ಮಂಗಲಪದವು : ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ವತಿಯಿಂದ ವನ ಮಹೋತ್ಸವ ಮತ್ತು ಸಸಿ ವಿತರಣೆ

ಬಂಟ್ವಾಳ, ಜೂನ್ 30, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಸಮಿತಿ, ಪಾಣೆಮಂಗಳೂರು ಬ್ಲಾಕ್ ಅಸಂಘಟಿತ ಕಾಂಗ್ರೆಸ್ ಸಮಿತಿ ಹಾಗೂ ವೀರಕಂಭ ವಲಯ ಕಾಂಗ್ರೆಸ್ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ವೀರಕಂಭ ಗ್ರಾಮದ ಮಂಗಿಲಪದವು ಪರಿಸರದಲ್ಲಿ ವನಮಹೋತ್ಸವ ಮತ್ತು ಸಸಿ ವಿತರಣೆ ಕಾರ್ಯಕ್ರಮ ನಡೆಯಿತು. 

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಬಿ ರಮನಾಥ ರೈ ಮಾತನಾಡಿ, ಗಿಡಗಳನ್ನು ನೆಡುವುದರೊಂದಿಗೆ ಪರಿಸರದ ಕಾಳಜಿ ಮತ್ತು ಹವಾಮಾನ ವೈಪರೀತ್ಯವನ್ನು ತಡೆಯುವಂತಹ ಕೆಲಸವನ್ನು ಮಾಡಿದಂತಾಗುತ್ತದೆ. ಇಂತಹ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ಇದ್ದ ಮರಗಳನ್ನು ಉಳಿಸಲು ನಾವು ಪ್ರಯತ್ನಿಸಬೇಕು. ಅರಣ್ಯ ಸಂಪತ್ತನ್ನು ಅಭಿವೃದ್ಧಿಪಡಿಸುವುದು ಜಗತ್ತಿಗೆ ನಾವು ಕೊಡುವ ಬಹುದೊಡ್ಡ ಕೊಡುಗೆ ಎಂದರು. 

ದಕ್ಷಿಣ ಕನ್ನಡ ಜಿಲ್ಲಾ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಭಂಡಾರಿ, ಮಾಜಿ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ದನ, ವೀರಕಂಭ ವಲಯ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ಪ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಘಟಕಾಧ್ಯಕ್ಷ ರವಿರಾಜ್ ಆಳ್ವ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ನಿರಂಜನ್ ರೈ, ಪದಾಧಿಕಾರಿಗಳಾದ ಹರ್ಷದ್ ಕುಕ್ಕಿಲ, ನಿಯಾಝ್, ರಾಮಚಂದ್ರ ಪ್ರಭು, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸತೀಶ್ ಪೂಜಾರಿ, ಪ್ರಮುಖರಾದ ಸತೀಶ್ ಪೂಜಾರಿ ಬಾಯಿಲ, ಹರೀಶ್ ರೈ ಕಲ್ಮಲೆ, ದೇವದಾಸ್ ಶೆಟ್ಟಿ, ವಸಂತ, ಶರೀಫ್, ಹಮೀದ್ ಕೆಲಿಂಜ, ಹಕೀಂ, ಗಣೇಶ್, ಯೂಸುಫ್, ಶ್ರೀಮತಿ ಪ್ರೇಮ,  ಪ್ರಭು ಮೊದಲಾದವರು ಭಾಗವಹಿಸಿದ್ದರು. ರವಿರಾಜ್ ಆಳ್ವ ಸ್ವಾಗತಿಸಿ, ಕೃಷ್ಣಪ್ಪ ಪೂಜಾರಿ ವಂದಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಲಪದವು : ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ವತಿಯಿಂದ ವನ ಮಹೋತ್ಸವ ಮತ್ತು ಸಸಿ ವಿತರಣೆ Rating: 5 Reviewed By: karavali Times
Scroll to Top