ಒ.ಎಲ್.ಎಕ್ಸ್ ಆಪ್ ನಲ್ಲಿ ಕಾರು ಮಾರಾಟದ ಹೆಸರಲ್ಲಿ ಹಣ ಪಡೆದು ವಂಚನೆ : ಆರೋಪಿ ಬಂಧನ - Karavali Times ಒ.ಎಲ್.ಎಕ್ಸ್ ಆಪ್ ನಲ್ಲಿ ಕಾರು ಮಾರಾಟದ ಹೆಸರಲ್ಲಿ ಹಣ ಪಡೆದು ವಂಚನೆ : ಆರೋಪಿ ಬಂಧನ - Karavali Times

728x90

29 June 2025

ಒ.ಎಲ್.ಎಕ್ಸ್ ಆಪ್ ನಲ್ಲಿ ಕಾರು ಮಾರಾಟದ ಹೆಸರಲ್ಲಿ ಹಣ ಪಡೆದು ವಂಚನೆ : ಆರೋಪಿ ಬಂಧನ

ಮಂಗಳೂರು, ಜೂನ್ 29, 2025 (ಕರಾವಳಿ ಟೈಮ್ಸ್) : ಒ ಎಲ್ ಎಕ್ಸ್ ಆಪ್ ಮೂಲಕ ಕಾರು ಮಾರಾಟದ ಹೆಸರಿನಲ್ಲಿ ಹಣ ಪಡೆದು ವಂಚನೆ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಸೆನ್ ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ಆರೋಪಿಯನ್ನು ಉತ್ತರ ಕನ್ನಡ ಜಿಲ್ಲೆಯ ಸೊರಬಾ ರಸ್ತೆ, ಸರಕಾರಿ ಆಸ್ಪತ್ರೆ ಹತ್ತಿರದ ನಿವಾಸಿ ಮಂಜುನಾಥ ರೇವಣಕರ ಅವರ ಪುತ್ರ ರವಿಚಂದ್ರ ಮಂಜುನಾಥ ರೇವಣಕರ (29) ಎಂದು ಹೆಸರಿಸಲಾಗಿದೆ. 

ಮಂಗಳೂರು ನಗರ ಸೆನ್  ಕ್ರೈಂ ಪೆÇಲೀಸ್ ಠಾಣೆಯಲ್ಲಿ ದಾಖಲಾದ ಠಾಣಾ ಅಪರಾಧ ಕ್ರಮಾಂಕ 28/2025 ಕಲಂ 66(ಸಿ) 66(ಡಿ) ಐಟಿ ಕಾಯ್ದೆ, 318(4), 3(5), 112 ಭಾರತೀಯ ನ್ಯಾಯ ಸಂಹಿತೆ  ಪ್ರಕರಣದಲ್ಲಿ ದೂರುದಾರರಿಂದ ರವಿಚಂದ್ರ ಮಂಜುನಾಥ  ಎಂಬ ವ್ಯಕ್ತಿ ಒ ಎಲ್ ಎಕ್ಸ್ ಆಪ್ ಮೂಲಕ ಕಾರು ಮಾರಾಟದ ಹೆಸರಿನಲ್ಲಿ 2.50 ಲಕ್ಷ ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದು, ಈ ಬಗ್ಗೆ  ಜೂನ್ 28 ರಂದು ಮಂಗಳೂರು ಸೆನ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ಆರೋಪಿಯು  ಹೊಸಪೇಟೆಯಲ್ಲಿರುವ ಬಗ್ಗೆ ಮಾಹಿತಿ ಪಡೆದು ಹೊಸಪೇಟೆ ಹತ್ತಿರ ಆರೋಪಿ ಪತ್ತೆ ಕರ್ತವ್ಯದ್ದಲ್ಲಿದ್ದ ಸೆನ್ ಪೆÇಲೀಸ್ ಠಾಣಾ ತನಿಖಾ ತಂಡವನ್ನು ಹೊಸಪೇಟೆಗೆ ಕಳುಹಿಸಿ ಆರೋಪಿ ರವಿಚಂದ್ರ ಮಂಜುನಾಥ ರೇವಣಕರ ಎಂಬಾತನನ್ನು ವಶಕ್ಕೆ ಪಡೆದು  ಸೆನ್ ಪೆÇಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ. 

ತನಿಖೆ ವೇಳೆ ಆರೋಪಿತನು ವಿವಿಧ ಬ್ಯಾಂಕುಗಳಲ್ಲಿ ಒಟ್ಟು 21 ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, 8 ಸಿಮ್ ಕಾಡುಗಳು ಬಳಕೆ ಮಾಡಿರುವುದು ಕಂಡುಬಂದಿರುತ್ತದೆ. ಸದ್ರಿ 8 ಮೊಬೈಲ್ ಸಂಖ್ಯೆಗಳ ಮೇಲೆ 80ಕ್ಕೂ ಹೆಚ್ಚಿನ ಸೈಬರ್ ವಂಚನೆ ದೂರುಗಳು ದಾಖಲಾಗಿರುವುದು ತಿಳಿದು ಬಂದಿದೆ. 

ಆರೋಪಿಯು ಕಳೆದ 3 ವರ್ಷಗಳಿಂದ ಒ ಎಲ್ ಎಕ್ಸ್ ಆಲ್ ಮೂಲಕ ಕಾರು ಮಾರಾಟದ ಹೆಸರಿನಲ್ಲಿ  ಹಣ ಪಡೆದು ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ತಾನು ಉಪಯೋಗಿಸುತ್ತಿದ್ದ ಮೊಬೈಲನ್ನು ಕೆಲ ದಿನಗಳ ಮಟ್ಟಿಗೆ ಇಟ್ಟುಕೊಂಡು ಅದನ್ನು ಮಾರಾಟ ಮಾಡುತ್ತಿದ್ದ. ಹೊಸ ಸಿಮ್ ಗಳನ್ನು ಉಪಯೋಗಿಸುತ್ತಿರುವುದು ಕಂಡು ಬಂದಿರುತ್ತದೆ. ಆರೋಪಿಯನ್ನು ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಂಗಳೂರು ನಗರ ಸೆನ್  ಕ್ರೈಂ ಪೆÇಲೀಸ್ ಠಾಣಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಒ.ಎಲ್.ಎಕ್ಸ್ ಆಪ್ ನಲ್ಲಿ ಕಾರು ಮಾರಾಟದ ಹೆಸರಲ್ಲಿ ಹಣ ಪಡೆದು ವಂಚನೆ : ಆರೋಪಿ ಬಂಧನ Rating: 5 Reviewed By: karavali Times
Scroll to Top