ಬಂಟ್ವಾಳ, ಜೂನ್ 28, 2025 (ಕರಾವಳಿ ಟೈಮ್ಸ್) : ಮುಹಿಯುದ್ದೀನ್ ಎಜುಕೇಶನ್ ಟ್ರಸ್ಟ್ ತುಂಬೆ ಇದರ ಸಂಸ್ಥಾಪಕರ ದಿನಾಚರಣೆ ತುಂಬೆ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬರ್ನಿಂಗ್ ಹ್ಯಾಮ್ ಹೀರ್ಸಿಂಕ್ ಸ್ಕೂಲ್ ಆಫ್ ಮೆಡಿಸಿನ್ ಅಲಬಾಮಾ ಯುನಿವರ್ಸಿಟಿಯಲ್ಲಿ ಸೀನಿಯರ್ ವೈಸ್ ಪ್ರೆಸಿಡೆಂಟ್ ಫಾರ್ ಮೆಡಿಸಿನ್ ಮತ್ತು ಡೀನ್ ಡಾ ಅಗರ್ ವಾಲ್ ಮಾತನಾಡಿ, ತುಂಬೆ ಸಮೂಹ ಸಂಸ್ಥೆಗಳ ಸ್ಥಾಪಕ ಡಾ ಹಾಜಿ ಬಿ ಅಹ್ಮದ್ ಹಾಜಿ ಅವರ ಸಾಧನಾ ಯಶೋಗಾಥೆ ಹಾಗೂ ಅವರು ಶಿಕ್ಷಣಕ್ಕೆ ಮತ್ತು ವಿವಿಧ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳ ಬಗ್ಗೆ ಶ್ಲಾಘಿಸಿದರು.
ಇದೇ ವೇಳೆ ತುಂಬೆ ಮೊಯ್ದೀನ್ ಅವರು ಕೊಡುಗೆಯಾಗಿ ನೀಡಿರುವ ಕಾಲೇಜಿನ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಇದನ್ನು ಬರ್ನಿಂಗ್ ಹ್ಯಾಮ್ ಅಲಬಾಮಾ ಯುನಿವರ್ಸಿಟಿಯ ಗ್ರಾಜುವೇಟ್ ಸ್ಕೂಲ್ ಇದರ ರಿಸರ್ಚ್ ಎಂಡ್ ಟ್ರೈನಿಂಗ್ ಸೆಂಟರಿನ ಎಸೋಸಿಯೇಟ್ ಡೀನ್ ಡಾ ಲಿಸಾ ಎಂ ಕರ್ಟಿಸ್ ಅವರು ಉದ್ಘಾಟಿಸಿದರು. ಕಾಲೇಜಿನ ಸಿವಿಲ್ ಕೆಲಸದ ಸೂಪರ್ವಿಶನ್ ಕಾರ್ಯದಲ್ಲಿ ಸಹಕರಿಸಿದ ಬಿ ಎ ಗ್ರೂಪ್ ಇದರ ಸಿರಾಜ್ ಮತ್ತು ಸುಧೀರ್ ಅವರನ್ನು ಗೌರವಿಸಲಾಯಿತು.
ಸಂಸ್ಥಾಪಕರ ದಿನಾಚರಣೆಯ ಪ್ರಮುಖ ಅಂಗವಾಗಿ ಯಕ್ಷಗಾನ ಕಲಾವಿದ ಹಾಗೂ ಚಿತ್ರ ಕಲಾ ಅಧ್ಯಾಪಕ ಪದ್ಮನಾಭ ಅವರು ಸಂಸ್ಥಾಪಕ ಡಾ ಅಹಮದ್ ಹಾಜಿ ಅವರ ಕುರಿತಾದ ಸಂಸ್ಮರಣಾ ನುಡಿಗಳನ್ನಾಡಿದರು.
ಎಂಇಟಿ ಟ್ರಸ್ಟಿ, ತುಂಬೆ ಫೆಸ್ಟ್ 2025 ರ ರೂವಾರಿ ಮೊಹಮ್ಮದ್ ಅಶ್ರಫ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಂಪ್ಯೂಟರ್ ಲ್ಯಾಬ್ ನಿರ್ವಾಹಕ ಗೋಪಾಲ್ ನಿವೃತ್ತ ಪ್ರಾಂಶುಪಾಲ ಗಂಗಾಧರ ಆಳ್ವ, ಪಿಟಿಎ ಅಧ್ಯಕ್ಷ ನಿಸಾರ್ ಅಹಮದ್, ಕಾರ್ಯಕಾರಿ ಸಮಿತಿಯ ಪ್ರಮುಖರಾದ ಮ್ಯಾಕ್ಸಿಂ ಕುವೆಲ್ಹೋ, ಬಶೀರ್ ತಂಡೇಲ್, ಶಾಫಿ ಅಮ್ಮೆಮ್ಮಾರ್, ತುಂಬೆ ಹೈಸ್ಕೂಲ್ ನಿವೃತ್ತ ಮುಖ್ಯ ಶಿಕ್ಷಕ ಶ್ರೀನಿವಾಸ್ ಕೆ, ನಿವೃತ್ತ ಕನ್ನಡ ಶಿಕ್ಷಕ ರಾಜ ಶೆಟ್ಟಿ, ಎಂಇಟಿ ಮ್ಯಾನೇಜರ್ ಅಬ್ದುಲ್ ಕಬೀರ್, ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಮಲ್ಲಿಕಾ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.
ಕಾಲೇಜು ಪ್ರಾಂಶುಪಾಲ ವಿ ಎಸ್ ಭಟ್ ಸ್ವಾಗತಿಸಿ, ತುಂಬೆ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕಿ ವಿದ್ಯಾ ಕೆ ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಂ ಜೆ ನಾಯಕ್ ಕೆ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment