ಮಂಗಳೂರು, ಜುಲೈ 15, 2025 (ಕರಾವಳಿ ಟೈಮ್ಸ್) : 22 ವರ್ಷಗಳ ಹಿಂದೆ ಧರ್ಮಸ್ಥಳ ದೇವಸ್ಥಾನ ವಠಾರದಿಂದ ಕಾಣೆಯಾದ ಯುವತಿಯ ನಾಪತ್ತೆ ಪ್ರಕರಣ ಬಗ್ಗೆ ವಿಚಾರಣೆ ನಡೆಸುವಂತೆ ಯುವತಿಯ ತಾಯಿ ಮಂಗಳವಾರ (ಜುಲೈ 15) ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಅವರಿಗೆ ದೂರು ನೀಡಿ ಆಗ್ರಹಿಸಿದ್ದಾರೆ.
ಅನನ್ಯ ಭಟ್ ಎಂಬ ಹೆಸರಿನ ವೈದ್ಯಕೀಯ ವಿಧ್ಯಾರ್ಥಿನಿಯು 2003ನೇ ವರ್ಷದಲ್ಲಿ ಧರ್ಮಸ್ಥಳ ದೇವಸ್ಥಾನದ ವಠಾರದಿಂದ ಕಣ್ಮರೆಯಾಗಿದ್ದಳು. ಈ ಬಗ್ಗೆ ವಿಚಾರಣೆ ನಡೆಸುವಂತೆ ಸದ್ರಿ ಯುವತಿಯ ತಾಯಿ ಜಿಲ್ಲಾ ಎಸ್ಪಿ ಕಛೇರಿಯಲ್ಲಿ ಮಂಗಳವಾರ ಎಸ್ಪಿ ಅವರಿಗೆ ದೂರು ಅರ್ಜಿ ನೀಡಿರುತ್ತಾರೆ. ದೂರಿನ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಅರುಣ್ ಕೆ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
0 comments:
Post a Comment