ಬಂಟ್ವಾಳ, ಜುಲೈ 03, 2025 (ಕರಾವಳಿ ಟೈಮ್ಸ್) : ಮನೆ ಬಳಿ ನಿಲ್ಲಿಸಿದ್ದ ಬೈಕ್ ಕಳವಾದ ಘಟನೆ ಪುದು ಗ್ರಾಮದ ಮಾರಿಪಳ್ಳದಲ್ಲಿ ನಡೆದಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಪುದು ಗ್ರಾಮದ ಸುಜೀರು-ಕಾನ ನಿವಾಸಿ ಜಾಫರ್ ಶರೀಫ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಇವರು 2017ನೇ ವರ್ಷದಲ್ಲಿ ಕೈಕಂಬದಲ್ಲಿರುವ ಹೋಂಡಾ ಮೋಟಾರ ಸೈಕಲ್ ಶೋರೂಮಿನಿಂದ ಹೊಸದಾಗಿ ಮೋಟಾರ್ ಸೈಕಲ್ ಖರೀದಿ ಮಾಡಿದ್ದು ಅವರ ಹೆಸರಿನಲ್ಲಿ ಬಂಟ್ವಾಳ ಆರ್ ಟಿ ಒ ಕಛೇರಿಯಲ್ಲಿ ಕೆಎ19 ಇವಿ 2039ರಂತೆ ನೊಂದಣಿ ಮಾಡಿಕೊಂಡಿರುತ್ತಾರೆ. ಇವರಿಗೆ ಮೋಟಾರ್ ಸೈಕಲ್ ಓಡಿಸಲು ಬರದೇ ಇದುದ್ದರಿಂದ ಅವರ ಅಣ್ಣ ಸರ್ಪುದ್ಧೀನ್ ಉಪಯೋಗಿಸುತ್ತಿದ್ದು. ಕಳೆದ ಮಾರ್ಚ್ 25 ರಂದು ಅಣ್ಣ ಸರ್ಫುದ್ದೀನ್ ಅವರು ತನ್ನ ಹೆಂಡತಿಯ ಮನೆಯಾದ ಮಾರಿಪಳ್ಳಕ್ಕೆ ಹೋಗಿದ್ದು, ರಾತ್ರಿ ಸುಮಾರು 9 ಗಂಟೆಗೆ ಮೋಟಾರ್ ಸೈಕಲನ್ನು ಅವರ ಮನೆ ಬಳಿಯ ರಾಘವೇಂದ್ರ ಗ್ಯಾರೇಜ್ ಬಳಿ ನಿಲ್ಲಿಸಿದ್ದು, ಮರು ದಿನ ಅಂದೆ ಮಾರ್ಚ್ 26 ರಂದು ಬೆಳಿಗ್ಗೆ 8 ಗಂಟೆಗೆ ಬೆಳಿಗ್ಗೆ ಎದ್ದು ಅಣ್ಣ ಮೋಟಾರ್ ಸೈಕಲ್ ಇಟ್ಟ ಸ್ಥಳಕ್ಕೆ ಹೋಗಿ ನೋಡಿದಾಗ ಮೋಟಾರ್ ಸೈಕಲ್ ಕಳವಾಗಿದೆ. ಕಳವಾಗಿರುವ ಬೈಕಿನ ಮೌಲ್ಯ 25 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment