ಬಂಟ್ವಾಳ, ಜುಲೈ 03, 2025 (ಕರಾವಳಿ ಟೈಮ್ಸ್) : ಮರಕ್ಕೆ ಸಿಂಪಡಿಸಲು ತಂದಿದ್ದ ಮೈಲುತುತ್ತು ವಿಷ ಪದಾರ್ಥ ಸೇವಿಸಿ ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ಎಂಬಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಮೃತ ಮಹಿಳೆಯನ್ನು ಇಲ್ಲಿನ ನಿವಾಸಿ ಯಮುನಾ (65) ಎಂದು ಹೆಸರಿಸಲಾಗಿದೆ. ಇವರು ಬುಧವಾರ ಬೆಳಿಗ್ಗೆ ಮರಕ್ಕೆ ಸಿಂಪಡಿಸಲು ತಂದಿದ್ದ ಮೈಲುತುತ್ತು ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡು ಕೃಷಿ ಹೊಂಡಕ್ಕೆ ಬಿದ್ದಿದ್ದು ನೆರೆಮನೆ ನಿವಾಸಿ ಯಶೋಧಾ ಅವರು ಮೇಲಕ್ಕೆತ್ತಿ ಬಂಟ್ವಾಳ ಸರಕಾರ ಆಸ್ಪತ್ರೆಗೆ ಸಾಗಿಸಿದರಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೃತರ ಸಂಬಂಧಿ ರತೀಶ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment