ಬಂಟ್ವಾಳ, ಜುಲೈ 05, 2025 (ಕರಾವಳಿ ಟೈಮ್ಸ್) : ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ತುಂಬೆ ಗ್ರಾಮದ ಕೆಳಗಿನ ತುಂಬೆ ಎಂಬಲ್ಲಿ ಶನಿವಾರ ಮದ್ಯಾಹ್ನದ ವೇಳೆ ಸಂಭವಿಸಿದೆ.
ಮೃತ ಕಾರು ಚಾಲಕನನ್ನು ಹರೇಕಳ ಗ್ರಾಮದ ಎಲ್ಯಾರ್ ಪದವು ದೆಬ್ಬೇಳಿ ನಿವಾಸಿ ನೌಫಲ್ ಎಂದು ತಿಳಿದುಬಂದಿದೆ. ಇವರು ಶನಿವಾರ ಬೆಳಿಗ್ಗೆ ಬಿ ಸಿ ರೋಡು ಸಮೀಪದ ಕೈಕಂಬ ನಿವಾಸಿಯೊಬ್ಬರಿಂದ ಸ್ವಿಫ್ಟ್ ಕಾರು ಖರೀದಿಸಿ ಚಲಾಯಿಸಿಕೊಂಡು ತೆರಳುತ್ತಿದ್ದ ವೇಳೆ ಈ ಭೀಕರ ಘಟನೆ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ಭೀಕರತೆಗೆ ಕಾರು ಹಲವು ಪಲ್ಟಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದು, ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಷ್ಟೆ.
0 comments:
Post a Comment