ಬಂಟ್ವಾಳ, ಜುಲೈ 05, 2025 (ಕರಾವಳಿ ಟೈಮ್ಸ್) : ರಸ್ತೆ ಬದಿಯ ಗುಡ್ಡಕುಸಿತದ ವೇಳೆ ಬೃಹತ್ ಬಂಡೆ ಕಲ್ಲೊಂದು ಹೆದ್ದಾರಿಗೆ ಉರುಳಿ ಬಿದ್ದ ಪರಿಣಾಮ ವಾಹನ ಸಂಚಾರ ಬಾಧಿತವಾದ ಘಟನೆ ಬಿ ಸಿ ರೋಡು-ವಿಲ್ಲಾಪುರಂ ರಾಷ್ಟೀಯ ಹೆದ್ದಾರಿಯ ಬಂಟ್ವಾಳ ಸಮೀಪದ ಭಂಡಾರಿಬೆಟ್ಟು ಶನಿವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.
ಶನಿವಾರ ಮಧ್ಯಾಹ್ನ ಸುರಿದ ಭಾರಿ ಮಳೆಗೆ ರಸ್ತೆ ಬದಿಯ ಗುಡ್ಡದ ಮಣ್ಣು ಕುಸಿದ ವೇಳೆ ಬಂಡೆಕಲ್ಲು ರಸ್ತೆಗೆ ಉರುಳಿ ಬಿದ್ದಿದೆ ಎನ್ನಲಾಗಿದೆ. ಘಟನೆಯಿಂದ ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಬಳಿಕ ಸ್ಥಳಕ್ಕಾಗಮಿಸಿದ ಸ್ಥಳೀಯ ಪುರಸಭಾ ಕೌನ್ಸಿಲರ್ ಹರಿಪ್ರಸಾದ್ ಹಾಗೂ ಕಂದಾಯ ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಿದ್ದು, ಬಂಟ್ವಾಳ ಪುರಸಭೆ ಹಾಗೂ ಕಂದಾಯ ಇಲಾಖೆ ವತಿಯಿಂದ ಜೆಸಿಬಿ ಬಳಸಿ ಬಂಡೆಕಲ್ಲು ತೆರವು ಕಾರ್ಯಾಚಣೆ ನಡೆಸಲಾಗಿದೆ.
0 comments:
Post a Comment