ಬಂಟ್ವಾಳ, ಜುಲೈ 13, 2025 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭಾ ಪೌರ ಕಾರ್ಮಿಕನ ಮನೆಯ 5 ತಿಂಗಳ ಗರ್ಭದ 3 ವರ್ಷ ಪ್ರಾಯದ ದನವನ್ನು ಮಧ್ಯ ರಾತ್ರಿ ವೇಳೆ ಅಪರಿಚಿತರು ಕಾರಿನಲ್ಲಿ ತುಂಬಿ ಪರಾರಿಯಾದ ಘಟನೆ ಶುಕ್ರವಾರ ರಾತ್ರಿ ವೇಳೆ ನಡೆದಿದೆ.
ಪುರಸಭಾ ಪೌರ ಕಾರ್ಮಿಕ, ನಾವೂರು ಗ್ರಾಮದ ನಾವೂರು ಶಾಲಾ ಬಳಿ ನಿವಾಸಿ ಸೇಸಪ್ಪ (45) ಅವರ ಮನೆಯಲ್ಲಿ ಈ ದನ ಕಳವು ಕೃತ್ಯ ನಡೆದಿದೆ. ಜುಲೈ 11 ರಂದು ರಾತ್ರಿ ಸೇಸಪ್ಪ ಅವರು ಊಟ ಮುಗಿಸಿ, ಮನೆ ಮಂದಿ ಜತೆ ಮಾತಾನಾಡುತ್ತಿದ್ದ ವೇಳೆ ಮನೆಯ ಹೊರಗಡೆ ರಸ್ತೆಯಲ್ಲಿ ಶಬ್ದ ಕೇಳಿದ್ದು, ಈ ಸಂದರ್ಭ ಸೇಸಪ್ಪ ಅವರ ಪುತ್ರ ಜಯರಾಮ ಅವರು ಹೊರಗಡೆ ಬಂದು ನೋಡಿದಾಗ ಮನೆಯ ಕಂಪೌಂಡ್ ಹೊರಗಡೆ ರಸ್ತೆ ಬದಿಯಲ್ಲಿ ಮೇಯಲು ಬಿಟ್ಟಿದ್ದ ಸಾಕು ದನವನ್ನು ಯಾರೋ ಕಾರಿಗೆ ತುಂಬುತ್ತಿರುವುದು ಕಂಡು ಬಂದಿದೆ. ಈ ಸಂದರ್ಭ ಸೇಸಪ್ಪ ಅವರು ಮನೆಯವರೊಂದಿಗೆ ಓಡಿ ಬಂದು ತಡೆಯಲು ಯತ್ನಿಸಿದ್ದರೂ ಅಪರಿಚಿತ ವ್ಯಕ್ತಿಗಳು ದನವನ್ನು ಬಿಳಿ ಬಣ್ಣದ ಕಾರಿಗೆ ತುಂಬಿ ಪರಾರಿಯಾಗಿದ್ದಾರೆ.
ಕಳವಾದ ದನ 3 ವರ್ಷದ ಪ್ರಾಯದ ಕಪ್ಪು ಬಣ್ಣದ್ದಾಗಿದ್ದು, 5 ತಿಂಗಳ ಗರ್ಭದ್ದಾಗಿರುತ್ತದೆ. ಇದರ ಮೌಲ್ಯ 15 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸೇಸಪ್ಪ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment